ಟೀಂ ಇಂಡಿಯಾ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಹೇಂದ್ರ ಸಿಂಗ್ ಧೋನಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಧೋನಿ ಈಗ ತಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಿದ್ದಾರೆ.
ಧೋನಿ ತಮ್ಮ ವಿವಾಹಕ್ಕೂ ಮುಂದೆ ಕೆಲವೊಂದು ವಿಚಾರಗಳಲ್ಲಿ ಸುದ್ದಿಯಲ್ಲಿದ್ದರು. ನಟಿ ಲಕ್ಷ್ಮಿ ರೈ ಅವರೊಂದಿಗೆ ಧೋನಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳೂ ಹರಿದಾಡಿದ್ದವು. 2008-2009ರ ಅವಧಿಯಲ್ಲಿ ಲಕ್ಷ್ಮಿ ರೈ ಮತ್ತು ಧೋನಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದಷ್ಟೇ ಅಲ್ಲದೇ ಧೋನಿ ತನ್ನ ಸ್ನೇಹಿತ ಸುರೇಶ್ ರೈನಾ ಜೊತೆಗೂಡಿ ಲಕ್ಷ್ಮಿ ರೈ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದರು.