ಕರ್ನಾಟಕ

karnataka

ETV Bharat / sitara

ಅಂಗರಕ್ಷಕರು ದೂರ ತಳ್ಳಿದ್ರೂ ಬಿಡದ ಫ್ಯಾನ್‌.. ಸೆಲ್ಫಿಗಾಗಿ ಗೋಗರೆದವನಿಗೆ ಕತ್ರೀನಾ ಮಾಡಿದ್ದೇನು? - news kannada

ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಬೇಕು ಎಂಬ ಕಾತುರತೆಯಲ್ಲಿ ಬಾಲಿವುಡ್​ ನಟಿ ಕತ್ರೀನಾ ಕೈಫ್ ಜೊತೆ ಕೆಟ್ಟದಾಗಿ ವರ್ತಿಸಿದ್ದಾರೆ ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ. ಈ ಪರಿಸ್ಥಿತಿಯ ನಡುವೆಯೂ ಕತ್ರೀನಾ ಕೂಲ್​ ಆಗಿಯೇ ವರ್ತಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಬಾಲಿವುಡ್​ ನಟಿ ಕತ್ರಿನಾ ಕೈಫ್

By

Published : Jul 2, 2019, 12:35 PM IST

ಬಾಲಿವುಡ್​ ನಟಿ ಕತ್ರೀನಾ ಕೈಫ್​ ತಮ್ಮ ಮೃದು ಸ್ವಭಾವದಿಂದ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಫ್ಯಾನ್ಸ್​ಗಳ ಹುಚ್ಚಾಟಕ್ಕೂ ನಯವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಪರದೆ ಹಿಂದೆಯೂ ತನ್ನ ವ್ಯಕ್ತಿತ್ವವನ್ನ ತೋರ್ಪಡಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಇವರ ನಡೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಬ್ಯುಜಿ ಲೈಫ್​ನಿಂದ ಹೊರಬಂದ ಕತ್ರೀನಾ ಕೈಫ್ ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದಳು. ಇವರನ್ನು ನೋಡಿದ ಫ್ಯಾನ್ಸ್​ ಸೆಲ್ಫಿಗಾಗಿ ಸುತ್ತುವರೆದಿದ್ದರು. ಸೆಲ್ಫಿ ತೆಗೆದುಕೊಳ್ಳುವ ಇವರ ಹುಚ್ಚಾಟ ಕಂಡ ಅಂಗರಕ್ಷಕರು ಅವರನ್ನು ತಳ್ಳಾಡುವ ಮೂಲಕ ದೂರ ಸರಿಸಿದ್ದಾರೆ. ಈ ವೇಳೆ ಓರ್ವ ಅಭಿಮಾನಿಯ ಮೊಬೈಲ್​ನ ಸಹ ಕಿತ್ತೆಸೆದಿದ್ದಾರೆ. ಇದರಿಂದ ಧೃತಿಗೆಡದ ಫ್ಯಾನ್ಸ್​ಗಳು ಮತ್ತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಸೆಲ್ಫಿಗಾಗಿ ಹಾತೊರೆಯುತ್ತಿರವುದನ್ನು ಕಂಡ ಕತ್ರೀನಾ ಕೈಫ್,​ ಕೂಲ್​ ಆಗಿಯೇ ಫೋಸ್ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಕತ್ರೀನಾ ಅಭಿಮಾನಿಗಳು ಅವರನ್ನು ಶ್ಲಾಘಿಸುತ್ತಿದ್ದಾರೆ. ಕೆಲವರು ಅಭಿಮಾನಿಗಳ ಹುಚ್ಚಾಟ ಹೆಚ್ಚಾಗಿದೆ ಎಂದರೆ, ಮತ್ತೆ ಕೆಲವರು ಅವಳು ಕೂಡ ಮನುಷ್ಯಳು, ಅವಳಿಗೂ ತನ್ನದೇ ಆದ ವೈಯಕ್ತಿಕ ಜೀವನ ಇರುತ್ತದೆ. ನಾವು ಅದನ್ನು ಗೌರವಿಸಬೇಕು ಎಂದು ಕಮೆಂಟ್​ ಬರೆದಿದ್ದಾರೆ. ಅಭಿಮಾನಿಗಳ ಹುಚ್ಚಾಟ ಇದೇ ಮೊದಲೇನೂ ಅಲ್ಲ ಎಂದೂ ಮತ್ತೊಂದಿಷ್ಟು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ABOUT THE AUTHOR

...view details