ಕರ್ನಾಟಕ

karnataka

ETV Bharat / sitara

'ಮಾಮಿ' ಚಲನಚಿತ್ರ ಸಂಸ್ಥೆಗೆ ರಾಜೀನಾಮೆ ನೀಡಿದ ಕರಣ್ ಜೋಹರ್ - ಚಲನಚಿತ್ರ ಸಂಸ್ಥೆಗೆ ರಾಜೀನಾಮೆ ನೀಡಿದ ಕರಣ್ ಜೋಹರ್

'ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್' (ಮಾಮಿ) ಎಂಬ ಪ್ರಸಿದ್ಧ ಚಲನಚಿತ್ರ ಸಂಸ್ಥೆಗೆ ಚಿತ್ರ ನಿರ್ಮಾಪಕ ಕರಣ್ ಜೋಹರ್ ರಾಜೀನಾಮೆ ನೀಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಚಿತ್ರ ನಿರ್ಮಾಪಕ ಕರಣ್ ಜೋಹರ್ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೆ ಒಳಗಾಗುತ್ತಿದ್ದು, ಈ ವಿವಾದದಿಂದ ಅಸಮಾಧಾನಗೊಂಡ ಕರಣ್ ಈ ನಿರ್ಧಾರ ಕೈಗೊಂಡಿದ್ದಾರೆ.

karan johar
karan johar

By

Published : Jun 26, 2020, 4:00 PM IST

ಮುಂಬೈ:ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಚಿತ್ರ ನಿರ್ಮಾಪಕ ಕರಣ್ ಜೋಹರ್ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೆ ಒಳಗಾಗುತ್ತಿದ್ದಾರೆ. ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತವನ್ನು ಉತ್ತೇಜಿಸುವ ಮತ್ತು ಸ್ಟಾರ್ ಕಿಡ್​ಗಳನ್ನು ಬೆಂಬಲಿಸುವ ಕಾರಣದಿಂದ ಜನರು ಕರಣ್ ಜೋಹರನ್ನು ಟ್ರೋಲ್ ಮಾಡುತ್ತಿದ್ದಾರೆ.

ಇಡೀ ವಿವಾದದಿಂದ ಅಸಮಾಧಾನಗೊಂಡ ಕರಣ್ 'ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್' (ಮಾಮಿ) ಎಂಬ ಪ್ರಸಿದ್ಧ ಚಲನಚಿತ್ರ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಬಂದಿವೆ.

ಅವರು ತಮ್ಮ ರಾಜೀನಾಮೆಗೆ ಸಂಬಂಧಿಸಿದಂತೆ ಮಂಡಳಿಯ ಇತರ ಅಧಿಕಾರಿಗಳಿಗೆ ಈ-ಮೈಲ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಕರಣ್ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 'ಮಾಮಿ'ಯಲ್ಲಿ ವಿಕ್ರಮಾದಿತ್ಯ ಮೋಟ್ವಾನೆ, ಸಿದ್ಧಾರ್ಥ್ ರಾಯ್ ಕಪೂರ್, ಜೋಯಾ ಅಖ್ತರ್ ಮತ್ತು ಕಬೀರ್ ಖಾನ್ ಕೂಡ ಇದ್ದಾರೆ.

ಕರಣ್ ಜೋಹರ್ ಮಾತ್ರವಲ್ಲದೇ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಅಭಿಷೇಕ್ ಬಚ್ಚನ್, ಜಾನ್ವಿ ಕಪೂರ್, ಅರ್ಜುನ್ ಕಪೂರ್, ಸೋನಮ್ ಕಪೂರ್ ಮತ್ತು ಸಲ್ಮಾನ್ ಖಾನ್ ಮುಂತಾದವರನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸ್ವಜನಪಕ್ಷಪಾತ ಮತ್ತು ಸ್ಟಾರ್ ಪವರ್ ಪ್ಲೇ ಕುರಿತು ಸಾರ್ವಜನಿಕರು ನಿಂದಿಸುತ್ತಿದ್ದಾರೆ.

ABOUT THE AUTHOR

...view details