ಬಾಲಿವುಡ್ ನಟ ಹೃತಿಕ್ ರೋಷನ್ ಅಂದ್ರೆ ಹಲವರಿಗೆ ಮಾದರಿ. ನಟನೆ ಜೊತೆಗೆ ನಿಲುವಿಗೆ ತಕ್ಕಂತೆ ದೇಹದಾಕಾರವನ್ನು ಕಾಯ್ದುಕೊಂಡಿರುವ ಅವರು ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇನ್ನು ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ಚಿತ್ರದ ಯಶಸ್ವಿ ಬಳಿಕ ಏನೆಲ್ಲಾ ನಡೆಯಿತು ಅನ್ನೋದನ್ನು ಕಾರ್ಯಕ್ರಮವೊಂದರಲ್ಲಿ ಅವರೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ನ ಈ ಸ್ಫುರದ್ರೂಪಿ ನಟನಿಗೆ ಇಷ್ಟು ಸಾವಿರ ಮದುವೆ ಆಫರ್ಗಳು ಬಂದಿದ್ವಂತೆ! - Hrithik Roshan marriage
ಪ್ರಪಂಚದ ಅತಿ ಸುಂದರ ವ್ಯಕ್ತಿ ಎಂಬ ಬಿರುದಿಗೆ ಪಾತ್ರರಾದ ನಟ ಹೃತಿಕ್ ರೋಷನ್ಗೆ ಈ ವರೆಗೆ ಎಷ್ಟು ಮದುವೆ ಆಫರ್ಗಳು ಹರಿದು ಬಂದಿರಬಹುದು? ನಿಮಗೆ ಊಹಿಸಲು ಸಾಧ್ಯವಿಲ್ಲ. ತಮ್ಮ ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ಚಿತ್ರದ ಬಳಿಕ ಬರೋಬ್ಬರಿ 30000 ಮದುವೆ ಆಫರ್ಗಳು ಅರಸಿ ಬಂದಿವೆ ಎಂದು ಅವರೇ ಬಹಿರಂಗ ಮಾಡಿದ್ದಾರೆ.
2000 ರಲ್ಲಿ ಬಿಡುಗಡೆಯಾದ 'ಕಹೋ ನಾ ಪ್ಯಾರ್ ಹೈ' ಚಿತ್ರ ಹಲವು ದಾಖಲೆ ಬರೆಯಿತು. ಮೊದಲ ಚಿತ್ರದಲ್ಲೇ ಹೃತಿಕ್ ರೋಷನ್ ಫಿಲ್ಮ್ ಫೇರ್ ಪ್ರಶಸ್ತಿ ಸಹ ಗಿಟ್ಟಿಸಿಕೊಂಡರು. 'ಕಹೋ ನಾ ಪ್ಯಾರ್ ಹೈ' ಸಿನಿಮಾ ಬಳಿಕ ಅದೃಷ್ಟದ ಬಾಗಿಲು ತಟ್ಟಿದ ಹೃತಿಕ್, ಯುವತಿಯರಿಗೆ ವಾಂಟೆಡ್ ನಟರಾದರು. ಈ ವರೆಗೆ ತಮಗೆ 30000 ಮದುವೆ ಆಫರ್ಗಳು ಬಂದಿವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಅದೇ ವರ್ಷ ನಾನು ಮದುವೆಯಾಗಿದ್ದರಿಂದ ಹಲವು ಯುವತಿಯರ ಹೃದಯಕ್ಕೆ ಪೆಟ್ಟು ಕೊಡಬೇಕಾಯಿತು ಎಂದು ಹಳೆ ಘಟನೆಯನ್ನು ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ.
ಇದೇ ಚಿತ್ರದಿಂದ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದ ನಟ ಹೃತಿಕ್ ರೋಷನ್ ಹಾಗೂ ನಟಿ ಅಮಿಶಾ ಪಟೇಲ್ 92 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದರು. ಇನ್ನು 30000 ಮದುವೆ ಆಫರ್ಗಳು ಬಂದಿರುವುದನ್ನು ರಿವೀಲ್ ಮಾಡಿದ್ದಕ್ಕೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.