1983 ರಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಬರೆದಿತ್ತು. ಭಾರತಕ್ಕೆ ಚೊಚ್ಚಲ ಟ್ರೋಫಿ ತಂದುಕೊಟ್ಟು ಹೆಮ್ಮೆಯಿಂದ ಬೀಗಿತ್ತು. ಅಂದು ಕ್ರೀಡಾಂಗಣದಲ್ಲಿ ಪರಾಕ್ರಮ ಮೆರೆದ ಭಾರತ ಕ್ರಿಕೆಟ್ ತಂಡದ ಕಲಿಗಳ ರೋಚಕ ಕಹಾನಿ ಈಗ ತೆರೆಯ ಮೇಲೆ ಬರುತ್ತಿದೆ.
'83' ಟೈಟಲ್ನಡಿ ಬಾಲಿವುಡ್ನಲ್ಲಿ ಸದ್ದಿಲ್ಲದೇ ಚಿತ್ರ ಸೆಟ್ಟೇರಿದೆ. ನಟ ರಣ್ವೀರ್ ಸಿಂಗ್1983ರಲ್ಲಿ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದ ಅಂದಿನ ಟೀಂ ನಾಯಕ ಕಪಿಲ್ ದೇವ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ತೆರೆ ಮೇಲೆ ಕ್ರಿಕೆಟರ್ ಆಗಿ ಕಾಣುತ್ತಿರುವ ರಣ್ವೀರ್, ಪಾತ್ರಕ್ಕಾಗಿ ಸಖತ್ ತಾಲೀಮು ನಡೆಸಿದ್ದಾರೆ. ಸ್ವತಃ ಕಪಿಲ್ ದೇವ್ ಅವರೇ ರಣವೀರ್ಗೆ ಕ್ರಿಕೆಟ್ನ ಪಾಠ ಮಾಡುತ್ತಿದ್ದಾರೆ.
ಕಪಿಲ್ ದೇವ್ ಪುತ್ರಿ ಅಮಿಯಾ (ಚಿತ್ರ ಕೃಪೆ : ಇನ್ಸ್ಟಾಗ್ರಾಂ ) ಸದ್ಯ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. 83 ಸಿನಿಮಾ ಮೂಲಕ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ಬಣ್ಣದ ಲೋಕಕ್ಕೆ ಪರಿಚಿತರಾಗುತ್ತಿದ್ದಾರೆ. ಹಾಗಂತ ಅವರು ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಈ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ವರ್ಕ್ ಮಾಡುತ್ತಿದ್ದಾರೆ. 23ರ ಈ ತರುಣೆ ಸಿನಿಮಾ ಪ್ರಿ-ಪ್ರೊಡಕ್ಷನ್ ಚಿತ್ರತಂಡಕ್ಕೆ ಸಹಾಯ ಮಾಡುತ್ತಿದ್ದಾರಂತೆ.
ಈ ಚಿತ್ರಕ್ಕೆ ಕಬೀರ್ ಖಾನ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇಂಗ್ಲೆಂಡ್ ಹಾಗೂ ಸ್ಕಾಟ್ಲ್ಯಾಂಡ್ ನಲ್ಲಿ 100ದಿನಗಳ ಕಾಲ ಈ ಚಿತ್ರಕ್ಕೆ ಶೂಟಿಂಗ್ ನಡೆಯಲಿದೆ. 2020 ರ ವೇಳೆಗ ತೆರೆಯ ಮೇಲೆ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು ಎನ್ನುತ್ತಿದೆ ಚಿತ್ರತಂಡ.