ಕರ್ನಾಟಕ

karnataka

ETV Bharat / sitara

'ಗ್ರೀಕ್​ ಆಫ್​ ಗಾಡ್​'​ ರಿಲೀಸ್‌ಗೆ ವಿಘ್ನ.. 'ಸೂಪರ್​ 30' ಹೃತಿಕ್‌ ವಿರುದ್ಧ 'ಮೆಂಟಲ್​ ಹೈ ಕ್ಯಾ' ಕಂಗನಾ ಪೈಪೋಟಿ! - ಸೂಪರ್​ 30

'ಮೆಂಟಲ್​ ಹೈ ಕ್ಯಾ' ಸಿನಿಮಾ ಕೂಡ ರಿಲೀಸ್​​ ಆಗಲಿದೆ. ಈ ಮೊದಲು ಜೂನ್​ 21 ಕ್ಕೆ ಸಿನಿಮಾ ಬಿಡುಗಡೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಇದೀಗ ದಿನಾಂಕ ಪೋಸ್ಟ್​ಪೋನ್​ ಮಾಡಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : May 8, 2019, 12:26 PM IST

ಬಾಲಿವುಡ್​ನ ಬೆಂಕಿ ಚೆಂಡು ಕಂಗನಾ ರಣಾವತ್​ ಮತ್ತೊಮ್ಮೆ 'ಗ್ರೀಕ್​ ಆಫ್​ ಗಾಡ್'​ ಜತೆ ಯುದ್ಧಕ್ಕಿಳಿದಿದ್ದಾರೆ. ಹೃತಿಕ್​ ರೋಷನ್​ ಅವರ 'ಸೂಪರ್​ 30' ಸಿನಿಮಾ ಬಿಡುಗಡೆಯಂದೇ ತಮ್ಮ 'ಮೆಂಟಲ್​ ಹೈ ಕ್ಯಾ'? ಚಿತ್ರ ತೆರೆಗೆ ತರುತ್ತಿದ್ದಾರೆ.

ಬಿಟೌನ್​ ಡೇರ್​ ನಟಿ ಕಂಗನಾ ಹಾಗೂ ಹೃತಿಕ್ ರೋಷನ್​ ನಡುವೆ ಕದನ ಇರೋದು ಎಲ್ಲರಿಗೂ ಗೊತ್ತು. 2016ರಿಂದ ಶುರುವಾದ ಈ ತಾರೆಯರ ಜಗಳಕ್ಕೆ ಫುಲ್ ಸ್ಟಾಪ್​ ಬೀಳೋ ಲಕ್ಷಣಗಳು ಕಾಣುತ್ತಿಲ್ಲ. ಆಗಾಗ ಹೃತಿಕ್ ಮೇಲೆ ಹರಿಹಾಯುವ ಕಂಗನಾ ಇದೀಗ ಬೆಳ್ಳಿ ಪರದೆ ಮೇಲೂ ಕಾಂಪೀಟ್ ಕೊಡಲು ಸಜ್ಜಾಗಿದ್ದಾರೆ.

ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರ ಜೂನ್​ 26 ರಂದು ಬಿಡುಗಡೆ ಆಗೋ ಪಕ್ಕಾ ಆಗಿದೆಯಂತೆ. ಇದೇ ಡೇಟ್​​ಗೆ ಕಂಗನಾ ಅಭಿನಯಿಸಿರುವ 'ಮೆಂಟಲ್​ ಹೈ ಕ್ಯಾ' ಸಿನಿಮಾ ಕೂಡ ರಿಲೀಸ್​​ ಆಗಲಿದೆ. ಈ ಮೊದಲು ಜೂನ್​ 21 ಕ್ಕೆ ಸಿನಿಮಾ ಬಿಡುಗಡೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಇದೀಗ ದಿನಾಂಕ ಪೋಸ್ಟ್‌ಪೋನ್​ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ವಿತರಕರ ಅನುಕೂಲಕ್ಕಾಗಿ ದಿನಾಂಕ ಬದಲಿಸಲಾಗಿದೆ ಹೊರತು, ಮತ್ತ್ಯಾವ ದುರುದ್ದೇಶವೂ ಇಲ್ಲ ಎಂದಿದೆ. ಆದರೆ, ಬಾಲಿವುಡ್ ಮಂದಿ ಮಾತ್ರ ಹೃತಿಕ್ ಚಿತ್ರಕ್ಕೆ ಟಕ್ಕರ್ ಕೊಡಲು ಕಂಗನಾ ಈ ರೀತಿ ಮಾಡಿದ್ದಾರೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಹಾಗೇ ನೋಡಿದ್ರೆ 'ಸೂಪರ್​ 30' ಚಿತ್ರ ಜನವರಿ 26 ರಂದೇ ಬಿಡುಗಡೆಯಾಗಬೇಕಿತ್ತು. ಇಲ್ಲಿಯೂ ಅಡ್ಡಗಾಲು ಹಾಕಿದ್ದ ಕಂಗನಾ, ತಮ್ಮ ಮಣಿಕರ್ಣಿಕಾ ಸಿನಿಮಾ ಜನವರಿ 26 ರಂದೇ ಬಿಡುಗಡೆ ಮಾಡಿದ್ದರು. ಸುಖಾಸುಮ್ಮನೆ ಪೈಪೋಟಿ ಯಾಕೆ ಎಂದು 'ಸೂಪರ್​ 30' ಚಿತ್ರತಂಡ ಹಿಂದಕ್ಕೆ ಸರಿದಿತ್ತು. ಇದೀಗ ಮತ್ತೆ ಕಂಗನಾ ಸವಾಲೊಡಿದ್ದು, ಬಾಕ್ಸ್​​ ಆಫೀಸ್​ನಲ್ಲಿ ಸೂಪರ್​ 30 ಹಾಗೂ ಮೆಂಟಲ್​ ಹೈ ಕ್ಯಾ ಕ್ಲಾಶ್ ಆಗೋದು ಪಕ್ಕಾ ಆಗಿದೆ.

ABOUT THE AUTHOR

...view details