ಕರ್ನಾಟಕ

karnataka

ETV Bharat / sitara

ಕಾಸ್ಟ್ಲಿಯಾದ್ರು ಕಂಗನಾ... ಜಯಲಲಿತಾ ಬಯೋಪಿಕ್​​ಗೆ ಕೇಳಿದ್ದು ಎಷ್ಟು ಕೋಟಿ ? - ಬಾಲಿವುಡ್​ ನಟಿ

ಬಾಲಿವುಡ್​ ನಟಿ ಕಂಗನಾ ರನಾವತ್​ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಬಯೋಪಿಕ್​ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವುದು ಮೊನ್ನೆಯಷ್ಟೆ ರಿವೀಲ್ ಆಗಿತ್ತು.

ಕಂಗನಾ

By

Published : Mar 26, 2019, 9:21 AM IST

ಮಹಿಳಾ ಪ್ರಧಾನ ಈ ಚಿತ್ರಕ್ಕೆ ಕಂಗನಾ ಹೇಳಿ ಮಾಡಿಸಿದ ನಟಿ ಎಂದು ಚಿತ್ರತಂಡ ಇವರನ್ನು ಸಂಪರ್ಕಿಸಿದೆ. ಈ ಬೋಲ್ಡ್ ಅಂಡ್​ ಬ್ಯೂಟಿ ಕೂಡ ತೆರೆ ಮೇಲೆ ತಮಿಳುನಾಡಿನ ಅಮ್ಮನಾಗಿ ಮಿಂಚಲು ಓಕೆ ಎಂದಿದ್ದಾರಂತೆ. ಆದರೆ, ಸಂಭಾವನೆ ಮಾತ್ರ ಜಾಸ್ತಿನೇ ಕೇಳಿದ್ದಾರಂತೆ.

ಮೂಲಗಳ ಪ್ರಕಾರ ಬರೋಬ್ಬರಿ 24 ಕೋಟಿ ಕೊಟ್ರೆ ಮಾತ್ರ ಅಭಿನಯಿಸುವುದಾಗಿ ಕಡ್ಡಿಮುರಿದಂತೆ ಕಂಗನಾ ಹೇಳಿದ್ದಾರಂತೆ. ಅವರ ಈ ಬೇಡಿಕೆಗೆ ದಿಗಿಲುಗೊಂಡಿರುವ ಚಿತ್ರತಂಡ, ಸ್ವಲ್ಪ ಸಮಯಾವಕಾಶ ಕೇಳಿದೆಯಂತೆ.

ಇನ್ನು ಬಾಲಿವುಡ್​ನಲ್ಲಿ ಯಾವ ನಟಿಮಣಿಗೂ ಇಷ್ಟು ಸಂಭಾವನೆಯಿಲ್ಲ. ಅಬ್ಬಬ್ಬಾ ಅಂದ್ರೆ 10 ಕೋಟಿ ಕೊಡುತ್ತಾರಷ್ಟೆ. ಆದರೆ, ಕಂಗನಾ ಇಷ್ಟು ದೊಡ್ಡಮೊತ್ತ ಕೇಳುತ್ತಿರುವುದಕ್ಕೆ ಕಾರಣವೂ ಇದೆ. ಇವರು ನಟಿಸಿರುವ ತನು ವೆಡ್ಸ್​​ ಮನು ರಿಟರ್ನ್​ ಹಾಗೂ ಕ್ವೀನ್ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿವೆ. ಇತ್ತೀಚಿಗಷ್ಟೆ ತೆರೆಕಂಡಿರುವ ಮಣಿಕರ್ಣಿಕಾ ಕೂಡ ಗಲ್ಲಾಪೆಟ್ಟಿಗೆ ತುಂಬಿಸಿತ್ತು. ಹೀಗಾಗಿ ಕಂಗನಾ ತಮ್ಮ ಹಣದ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಇನ್ನು ಜಯಲಲಿತಾ ಬಯೋಪಿಕ್​ ಚಿತ್ರಕ್ಕೆ ತಲೈವಿ ಎಂದು ಟೈಟಲ್ ಇಟ್ಟಿದ್ದು, ಎಎಲ್​ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಬಾಹುಬಲಿ ಖ್ಯಾತಿಯ ವೈಯ್​.ವಿ. ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಸ್ಕ್ರಿಪ್ಟ್​ ಕೆಲಸ ಮಾಡಿದ್ದಾರೆ. ಈ ಚಿತ್ರ ತಮಿಳು ಹಾಗೂ ಹಿಂದಿಯಲ್ಲಿ ತೆರೆಕಾಣಲಿದೆ.

ABOUT THE AUTHOR

...view details