ಮುಂಬೈ: ಅಂತಾರಾಜ್ಯದಿಂದ ಬರುವವರಿಗೆ ಇರುವ 14 ದಿನಗಳ ಹೋಂ ಕ್ವಾರಂಟೈನ್ ನಿಯಮದಿಂದ ಬಾಲಿವುಡ್ ನಟಿ ಕಂಗನಾ ರನೌತ್ಗೆ ಮುಂಬೈನ ಸ್ಥಳೀಯ ಆಡಳಿತ ವಿನಾಯಿತಿ ನೀಡಿದೆ.
ಹೋಂ ಕ್ವಾರಂಟೈನ್ ನಿಯಮದಿಂದ ನಟಿ ಕಂಗನಾಗೆ ವಿನಾಯಿತಿ - ಕಂಗನಾ ಮುಂಬೈ ಭೇಟಿ
'ಅಲ್ಪಾವಧಿಯ ಸಂದರ್ಶಕರ ವರ್ಗ'ದಡಿ ನಟಿ ಕಂಗನಾ ರನೌತ್ಗೆ 14 ದಿನಗಳ ಹೋಂ ಕ್ವಾರಂಟೈನ್ ನಿಯಮದಿಂದ ವಿನಾಯಿತಿ ನೀಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈಗೆ ಅಲ್ಪಾವಧಿಯ ಭೇಟಿಯಲ್ಲಿರುವ ಕಾರಣ ಕಂಗನಾ ಹೋಂ ಕ್ವಾರಂಟೈನ್ನಿಂದ ವಿನಾಯಿತಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಂಗನಾ ಅವರು ಒಂದು ವಾರಕ್ಕಿಂತಲೂ ಕಡಿಮೆ ಅವಧಿ ಮುಂಬೈನಲ್ಲಿರುವುದರಿಂದ 'ಅಲ್ಪಾವಧಿಯ ಸಂದರ್ಶಕರ ವರ್ಗ'ದಡಿ ವಿನಾಯಿತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈಯನ್ನ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಆಡಳಿತಾರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಕಂಗನಾ, ಬೆದರಿಕೆ ನಡುವೆಯೂ ನಿನ್ನೆ ಪೊಲೀಸ್ ಭದ್ರತೆಯೊಂದಿಗೆ ನಗರಕ್ಕೆ ಆಗಮಿಸಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಕಂಗನಾ ಸೆ. 14ರಂದು ಮುಂಬೈ ತೊರೆಯಲಿದ್ದಾರೆ.