ಕರ್ನಾಟಕ

karnataka

ETV Bharat / sitara

ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಮೂಲಕ ಬರ್ತ್‌ಡೇ ಆಚರಣೆಗೆ ಮುಂದಾದ ಸನ್ನಿ ಲಿಯೋನ್

ಸಿನಿರಂಗದ ಜೊತೆಗೆ ಸಾಮಾಜಿಕ ಕಳಕಳಿ ಹೊತ್ತ ಬಾಲಿವುಡ್​ ತಾರೆ ಸನ್ನಿ ಲಿಯೋನ್​ಗೆ ಇಂದು 40 ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಡಲು ಎಲ್ಲರೂ ವ್ಯಾಕ್ಸಿನ್​ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Sunny Leone
ಸನ್ನಿ ಲಿಯೋನ್

By

Published : May 13, 2021, 10:50 AM IST

ಬಾಲಿವುಡ್​ ತಾರೆ ಸನ್ನಿ ಲಿಯೋನ್​ಗೆ ಇಂದು 40 ನೇ ಹುಟ್ಟುಹಬ್ಬದ ಸಂಭ್ರಮ. ಸಿನಿರಂಗದ ಜೊತೆಗೆ ಸಾಮಾಜಿಕ ಕಳಕಳಿ ಹೊತ್ತ ಈ ಸುಂದರಿ ಅದೆಷ್ಟೋ ಕುಟುಂಬಗಳ ನೆರವಿಗೆ ನಿಂತಿದ್ದು ಗೊತ್ತಿರುವ ಸಂಗತಿ. ಇದೀಗ ಕೊರೊನಾ ವಿರುದ್ಧ ಹೋರಾಡೋಣ ಎಂಬ ಸಂದೇಶ ಸಾರಿದ್ದಾರೆ.

'ಪೀಪಲ್​ ಪಾರ್​ ದಿ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಅನಿಮಲ್'​ ಸಂಸ್ಥೆಯ ಜೊತೆಗೂಡಿ, ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಇವರು ಕೈ ಹಾಕಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗೆ ಮುಂದಾಗಿದ್ದಾರೆ.

"ನಾವು ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿದ್ದೇವೆ. ಆದರೆ ಇದನ್ನು ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ದೂರ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಪೆಟಾ ಜೊತೆ ಕೈ ಜೋಡಿಸುತ್ತಿದ್ದೇನೆ. ಈ ಸಂಸ್ಥೆಯ ಮೂಲಕ ನಾವು ವಲಸೆ ಕಾರ್ಮಿಕರಿಗೆ ಕಿಚಡಿ ಮತ್ತು ಹಣ್ಣುಗಳನ್ನು ನೀಡಲಿದ್ದೇವೆ" ಎಂದಿದ್ದಾರೆ.

ಅಷ್ಟೇ ಅಲ್ಲದೆ, ಇತ್ತೀಚಿಗೆ ದೇಶದ ಜನತೆ ವ್ಯಾಕ್ಸಿನ್​ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. "ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ. ಇದೀಗ ವ್ಯಾಕ್ಸಿನ್​ ಹಾಕಿಸಿಕೊಳ್ಳುವ ಸಮಯ. ಎಲ್ಲರೂ ಸುರಕ್ಷಿತವಾಗಿರಿ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಹಾಯ ಮಾಡೋಣ. ಜೊತೆಗೆ ಪ್ಲಾಸ್ಮಾ ದಾನಾ ಮಾಡೋಣ, ಅನೇಕ ಪ್ರಾಣಗಳನ್ನು ಉಳಿಸೋಣ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ABOUT THE AUTHOR

...view details