ನವದೆಹಲಿ :ಅಶ್ಲೀಲ ವಿಷಯಗಳ ಸೃಷ್ಟಿ ಮತ್ತು ವಿತರಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾನನ್ನು ಬಂಧಿಸಿದ ನಂತರ ಸುದ್ದಿಯಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಹಂಸಲ್ ಮೆಹ್ತಾ ತಮ್ಮ ಬೆಂಬಲ ಸೂಚಿಸಿದ್ದಾರೆ. ಶಿಲ್ಪಾಗೆ ಸ್ವಲ್ಪ ಪ್ರೈವೆಸಿ ನೀಡಿ, ನ್ಯಾಯಾಲಯದಲ್ಲಿ ಸಾಬೀತಾಗುವ ಮುನ್ನವೇ ಜನರು ವ್ಯಕ್ತಿಯನ್ನು ತಪ್ಪಿತಸ್ಥನೆಂದು ಘೋಷಿಸಬಾರದು ಎಂದು ಅವರು ಟ್ವೀಟ್ ಮಾಡಿದ್ದಾರೆ.
"ನೀವು ಆಕೆಯ ಪರವಾಗಿ ನಿಲ್ಲಲು ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಶಿಲ್ಪಾ ಶೆಟ್ಟಿ ಅವರೊಬ್ಬರನ್ನೇ ಬಿಟ್ಟು ಬಿಡಿ. ಕಾನೂನಿಗೆ ಎಲ್ಲವನ್ನೂ ನಿರ್ಧರಿಸಲು ಅವಕಾಶ ನೀಡುತ್ತೀರಾ? ಆಕೆಗೆ ಸ್ವಲ್ಪ ಘನತೆ ಮತ್ತು ಪ್ರೈವೇಸಿ ನೀಡಿ. ನ್ಯಾಯಾಲಯದಲ್ಲಿ ಸಾಬೀತಾಗುವ ಮುನ್ನವೇ ತಪ್ಪಿತಸ್ಥರೆಂದು ಘೋಷಿಸಲ್ಪಡುವುದು ದುರದೃಷ್ಟಕರ" ಎಂದು ಹಂಸಲ್ ಟ್ವೀಟ್ ಮೂಲಕ ಹೇಳಿದ್ದಾರೆ.