ಕರ್ನಾಟಕ

karnataka

By

Published : May 6, 2019, 4:35 PM IST

ETV Bharat / sitara

ಬಾಯ್​​​ಫ್ರೆಂಡ್ ಜೊತೆ ಉಂಗುರ ಬದಲಿಸಿಕೊಂಡ ರೋಬೊ ಬ್ಯೂಟಿ..!

ಮದುವೆಗೂ ಮುನ್ನ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದ ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ನಿನ್ನೆ ಲಂಡನ್​​​ನಲ್ಲಿ ತಮ್ಮ ಪ್ರಿಯತಮ ಜಾರ್ಜ್​ ಪಾನಾಯ್ಟೊವ್ ಜೊತೆ ಎಂಗೇಜ್​​​ಮೆಂಟ್ ಮಾಡಿಕೊಂಡಿದ್ದಾರೆ.

ಆ್ಯಮಿ ಜಾಕ್ಸನ್​

ಕನ್ನಡದ 'ದಿ ವಿಲನ್' ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳಲ್ಲಿ ​​ನಟಿಸಿರುವ ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಕೊನೆಗೂ ತಮ್ಮ ಬಾಯ್​ ಫ್ರೆಂಡ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಪ್ರಿಯತಮ ಜಾರ್ಜ್ ಪಾನಾಯ್ಟೊವ್ ಜೊತೆ ನಿನ್ನೆ ಲಂಡನ್​​ನಲ್ಲಿ ಉಂಗುರ ಬದಲಿಸಿಕೊಂಡಿದ್ದಾರೆ.

ಆ್ಯಮಿ ಜಾಕ್ಸನ್​ ಈಗ ಗರ್ಭಿಣಿ. ಮದುವೆಗೂ ಮುನ್ನ ಗರ್ಭಿಣಿಯಾಗಿರುವ ವಿಷಯವನ್ನು ಆ್ಯಮಿ ಯಾವುದೇ ಭಯವಿಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇವರ ಈ ಧೈರ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಎಂಗೇಜ್​ಮೆಂಟ್ ಫೋಟೋವನ್ನು ಇನ್ಸ್​​ಟಾಗ್ರಾಮ್​​ನಲ್ಲಿ ಶೇರ್ ಮಾಡಿಕೊಂಡಿರುವ ಆ್ಯಮಿ 'ಇಂದು ನನಗೆ ಬಹಳ ಮುಖ್ಯವಾದ ದಿನ. ನನಗೆ ಪ್ರೀತಿಯಿಂದ ಹಾರೈಸಿದ ನನ್ನ ಕುಟುಂಬದ ಸದಸ್ಯರು ಹಾಗೂ ಎಲ್ಲಾ ಸ್ನೇಹಿತರಿಗೂ ನನ್ನ ಧನ್ಯವಾದಗಳು' ಎಂದು ಆ್ಯಮಿ ಧನ್ಯವಾದ ಹೇಳಿದ್ದಾರೆ. ಗ್ರೀಕ್ ಸಂಪ್ರದಾಯದಂತೆ ಆ್ಯಮಿ ಹಾಗೂ ಜಾರ್ಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರಜನೀಕಾಂತ್ ಜೊತೆ ನಟಿಸಿದ್ದ ‘2.0’ ಸಿನಿಮಾದಲ್ಲಿ ಆ್ಯಮಿಯನ್ನು ಕೊನೆಯ ಬಾರಿ ನೋಡಲಾಗಿತ್ತು. ನಂತರ ತಾನು ಗರ್ಭಿಣಿ ಎಂದು ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಹೇಳಿಕೊಳ್ಳುವ ಮೂಲಕ ಆ್ಯಮಿ ಎಲ್ಲರಿಗೂ ಶಾಕ್ ನೀಡಿದ್ದರು. 'ಇದರಲ್ಲಿ ಬಚ್ಚಿಡುವುದೇನಿದೆ ಹೇಳಿ..? ಎಲ್ಲರೂ ಮದುವೆ ಬಳಿಕ ಮಗು ಪಡೆಯುತ್ತಾರೆ. ಆದರೆ, ನಾವು ಮದುವೆ ಮುನ್ನ ಪಡೆಯುತ್ತಿದ್ದೇವೆ ಅಷ್ಟೇ' ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದರು.

For All Latest Updates

TAGGED:

ABOUT THE AUTHOR

...view details