ಹೈದರಾಬಾದ್ : ಟಿ-ಸೀರಿಸ್ ಮ್ಯೂಸಿಕ್ ಕಂಪನಿಯ ‘ತಾರಿಣಿ’ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಪಡೆಯುತ್ತಿರುವ ಆರುಶಿ ನಿಶಾಂಕ್ ಈಗ ಸುದ್ದಿಯಾಗುತ್ತಿರುವ ನಟಿಯಾಗಿದ್ದಾರೆ.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಪುತ್ರಿಯಾಗಿರುವ ಈಕೆ, ಬಾಲಿವುಡ್ ಅಂಗಳಕ್ಕೆ ದುಮುಕ್ಕಿದ್ದು, ಚಿತ್ರ ಸಹ ಸೆಟ್ಟೇರಿದೆ. ಈಗಾಗಲೇ ‘ವಾಘಾ ನಾ ರಾಸ್ ಆಯೀ’ ಎಂಬ ಮ್ಯೂಸಿಕ್ ಆಲ್ಬಂನಲ್ಲೂ ಕಾಣಿಸಿಕೊಂಡಿದೆ.
ತಮ್ಮದೆ ಹೊಸ ಹೆಜ್ಜೆ ಗುರುತು ಸ್ಥಾಪಿಸಲು ಮುಂದಾಗಿದ್ದಾರೆ. ಅಲ್ಲದೆ ತಮ್ಮ ಮೊದಲ ಸಿನಿಮಾಗೆ ಸಹ ನಿರ್ಮಾಪಕರಾಗಿಯೂ ನಿಶಾಂಕ್ ಕಾರ್ಯನಿರ್ವಹಿಸುತ್ತಿದೆ. ಇದೇ ಮೊದಲ ಬಾರಿಗೆ ಓರ್ವ ಮಹಿಳೆ ತಮ್ಮದೇ ಮೊದಲ ಚಿತ್ರಕ್ಕೆ ಸಹನಿರ್ಮಾಪಕಿಯೂ ಆಗಿದ್ದಾರೆ.
ನೈಜ ಕಥೆ ತೆರೆಮೇಲೆ ತರಲು ಮುಂದಾದ ‘ತಾರಿಣಿ’ ಇದೀಗ ಈಟಿವಿ ಭಾರತ್ ಜೊತೆ ಅವರ ಮುಂದಿನ ಪ್ರಾಜೆಕ್ಟ್ ಕುರಿತು ಮುಕ್ತ ಮನಸ್ಸಿಂದ ಮಾತನಾಡಿದ್ದು, ಈ ಕುರಿತ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.