ಬಿಗ್ ಬಾಸ್ 14ರ ಸ್ಪರ್ಧಿ ಐಜಾಜ್ ಖಾನ್, ಪವಿತ್ರಾ ಪುನಿಯಾರೊಂದಿಗಿನ ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದಾರೆ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದು, ಲೈಫ್ ಅನ್ನು ಎಂಜಾಯ್ ಮಾಡ್ತಿದ್ದೀವಿ ಎಂದು ಹೇಳಿದ್ದಾರೆ.
ಪ್ರೀತಿಯ ಬಲೆಯಲ್ಲಿ ಐಜಾಜ್ - ಪವಿತ್ರಾ: ಲೈಫ್ ಬಿಂದಾಸ್ ಆಗಿದೆ ಎಂದ ಬಿಗ್ ಬಾಸ್ ಸ್ಪರ್ಧಿ
ಬಾಲಿವುಡ್ ಬಿಗ್ ಬಾಸ್-14 ರ ಸ್ಪರ್ಧಿ ಐಜಾಜ್ ಖಾನ್, ಪವಿತ್ರಾ ಪೂನಿಯಾ ಜತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಕುರಿತ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಐಜಾಜ್-ಪವಿತ್ರಾ
ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಐಜಾಜ್ ಖಾನ್, ಬಿಗ್ ಬಾಸ್ ರಿಯಾಲಿಟಿ ಶೋ ನನ್ನ ಪ್ರೀತಿಯನ್ನು ಕಂಡುಕೊಳ್ಳಲು ಒಂದು ಅವಕಾಶ ನೀಡಿತು. ಪವಿತ್ರಾ ಪುನಿಯಾ ಅವರೊಂದಿಗೆ ಪ್ರೀತಿಯಿಂದ ಹೆಚ್ಚು ಸಮಯ ಕಳೆದಿದ್ದೇನೆ. ಅವರೊಂದಿಗಿನ ಈ ಸಂಬಂಧ ಶಾಶ್ವತವಾಗಿರುತ್ತದೆ ಎಂದು ಐಜಾಜ್ ಹೇಳಿದ್ದರು.