ಬಾಲಿವುಡ್ ನಟಿ ದಿಶಾ ಪಟಾನಿ ತಾವು ನಟ, ಫಿಲ್ಮ್ ಮೇಕರ್, ಮಾರ್ಷಲ್ ಆರ್ಟ್ ಕಲಾವಿದ ಜಾಕಿಚಾನ್ ಜೊತೆ ಇರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2017 ರಲ್ಲಿ ಬಿಡುಗಡೆಯಾದ ಕುಂಗ್ ಫು ಯೋಗ ಚಿತ್ರದಲ್ಲಿ ದಿಶಾ, ಜಾಕಿಚಾನ್ ಜೊತೆ ನಟಿಸಿದ್ದರು. ಜನವರಿ 28 ಕ್ಕೆ ಈ ಸಿನಿಮಾ ಮೂರು ವರ್ಷಗಳನ್ನು ಪೂರೈಸಿದೆ.
ಜಾಕಿಚಾನ್ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿರುವ ದಿಶಾ,"ಕುಂಗ್ ಫು ಯೋಗ ಚಿತ್ರಕ್ಕೆ 4 ವರ್ಷಗಳ ಸಂಭ್ರಮ, ಲವ್ ಯು ಟಗ್ಗು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹಾರ್ಟ್ ಎಮೋಜಿಯನ್ನು ಸೇರಿಸಿದ್ದಾರೆ. ಈ ಫೋಟೋಗೆ ಇದುವರೆಗೂ 8 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ಸ್ ನೀಡಿದ್ದಾರೆ. ದಿಶಾ ಬಾಯ್ಫ್ರೆಂಡ್ ಎನ್ನಲಾದ ಟೈಗರ್ ಶ್ರಾಫ್ ಕೂಡಾ ಈ ಫೋಟೋವನ್ನು ಲೈಕ್ ಮಾಡಿದ್ದಾರೆ. ಇದರೊಂದಿಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಾಕಿಚಾನ್ ಜೊತೆ ಮತ್ತೊಂದು ಫೋಟೋ ಹಂಚಿಕೊಂಡಿರುವ ದಿಶಾ ಪಟಾನಿ "ಇದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ" ಎಂದು ಬರೆದುಕೊಂಡಿದ್ದಾರೆ. 'ಕುಂಗ್ ಫು ಯೋಗ' ಚಿತ್ರದಲ್ಲಿ ದಿಶಾ ಪಟಾನಿ ಇಂಡಿಯನ್ ಪ್ರೊಫೆಸರ್ ಅಶ್ಮಿತಾ ಪಾತ್ರದಲ್ಲಿ ನಟಿಸಿದ್ದಾರೆ. ಜಾಕಿಚಾನ್ ಆರ್ಕಿಯಾಲಜಿ ಪ್ರೊಫೆಸರ್ ಆಗಿ ನಟಿಸಿದ್ದಾರೆ.