ಕರ್ನಾಟಕ

karnataka

ETV Bharat / sitara

ಕತ್ರಿನಾ, ವಿಜಯ್ ಸೇತುಪತಿ ಅಭಿನಯದ 'ಮೇರಿ ಕ್ರಿಸ್​ಮಸ್'​ ಶೂಟಿಂಗ್​ಗೆ ಲಾಕ್​ಡೌನ್​ ಅಡ್ಡಿ

ದಕ್ಷಿಣದ ಖ್ಯಾತ ನಟ ವಿಜಯ್​ ಸೇತುಪತಿ ಹಾಗೂ ಬಾಲಿವುಡ್​ ಬೆಡಗಿ ಕತ್ರಿನಾ ಅಭಿನಯದ ಮೇರಿ ಕ್ರಿಸ್​ಮಸ್​ ಚಿತ್ರದ ಶೂಟಿಂಗ್​ ಕೊರೊನಾ ಲಾಕ್​ಡೌನ್​ ಕಾರಣಕ್ಕೆ ಮುಂದಕ್ಕೆ ಹೋಗಿದೆ.

vijay
vijay

By

Published : May 15, 2021, 5:03 PM IST

ಹೈದರಾಬಾದ್​:ಬಾಲಿವುಡ್ ದಿವಾ ಕತ್ರಿನಾ ಕೈಫ್ ಮತ್ತು ತಮಿಳು ಸೂಪರ್‌ಸ್ಟಾರ್ ವಿಜಯ್ ಸೇತುಪತಿ ಇಬ್ಬರೂ ರಮೇಶ್ ತೌರಾನಿ ನಿರ್ಮಿಸಲಿರುವ ಮುಂಬರುವ ಚಿತ್ರ ಮೇರಿ ಕ್ರಿಸ್‌ಮಸ್​ನಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ಸಿನಿಮಾದ ಮುಂದಿನ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಲಾಕ್​ಡೌನ್​ ಕೊನೆಯಾಗುವುದನ್ನೇ ಚಿತ್ರತಂಡ ಕಾಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ತೌರಾನಿ, ಭಾರತದ 90 ಪ್ರತಿಶತದಷ್ಟು ಜನರು ಲಾಕ್​​ಡೌನ್ ಸ್ಥಿತಿಯಲ್ಲಿರುವುದರಿಂದ ನಾವು ಬೇರೆಲ್ಲಿಯೂ ಶೂಟ್ ಮಾಡಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಲಾಕ್​​ಡೌನ್​ ತೆರವು ಬಳಿಕ ಶೂಟಿಂಗ್​ ಆರಂಭಿಸಲಿದ್ದೇವೆ ಎಂದರು.

ಈ ಚಿತ್ರದ ತ್ವರಿತಗತಿಯ ಕೆಲಸಕ್ಕಾಗಿ, ನಿರ್ದೇಶಕ ಶ್ರೀರಾಮ್ ರಾಘವನ್ ತಮ್ಮ ದೊಡ್ಡ ಬಜೆಟ್ ಚಿತ್ರ ವರುಣ್ ಧವನ್ ಅಭಿನಯದ ಇಕ್ಕೀಸ್ ಅನ್ನು ಬದಿಗಿರಿಸಿ ಸದ್ಯ ಮೇರಿ ಕ್ರಿಸ್​​ಮಸ್​ ಕಡೆ ಗಮನ ಹರಿಸಿದ್ದಾರೆ.

ಈ ಹಿಂದೆ ವಿಜಯ್ ಅವರು ಕತ್ರಿನಾ ಮತ್ತು ರಾಜ್ ಮತ್ತು ಡಿಕೆ ನಿರ್ದೇಶನದ ವೆಬ್ ಸರಣಿಗಳಲ್ಲಿ ನಟಿಸುತ್ತಿರುವ ಬಗ್ಗೆ ಹಂಚಿಕೊಂಡಿದ್ದರು. ಏಪ್ರಿಲ್ 6 ರಂದು ಕತ್ರಿನಾಗೆ ಕೋವಿಡ್​ ಪಾಸಿಟಿವ್​ ಬಂದ ಹಿನ್ನೆಲೆ ಏಪ್ರಿಲ್ 15 ರಂದು ಪ್ರಾರಂಭವಾಗಬೇಕಿದ್ದ ಶೂಟ್ ಅನ್ನು ರದ್ದುಗೊಳಿಸಬೇಕಾಗಿತ್ತು ಎಂದು ಸೂಪರ್ ಸ್ಟಾರ್ ಹೇಳಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಅಮೆಜಾನ್ ಪ್ರೈಮ್ ವಿಡಿಯೋ ವೆಬ್ ಸರಣಿಯ ಚಿತ್ರೀಕರಣವನ್ನು ವಿಜಯ್ ಪ್ರಾರಂಭಿಸಬೇಕಿತ್ತು. ಆದರೆ ಈಗ ಅದು ಸಾಧ್ಯವಾಗಿಲ್ಲ. ಇದರಲ್ಲಿ ಶಾಹಿದ್ ಕಪೂರ್ ಮತ್ತು ರಾಶಿ ಖನ್ನಾ ಮುಖ್ಯ ಪಾತ್ರಗಳಲ್ಲಿದ್ದಾರೆ.

ವಿಜಯ್ ಇನ್ನೂ ಎರಡು ಬಾಲಿವುಡ್ ಪ್ರಾಜೆಕ್ಟ್​ಗಳಿಗೆ ಸಹಿ ಹಾಕಿದ್ದಾರೆ, ಸಂತೋಷ್ ಶಿವನ್ ಅವರೊಂದಿಗೆ ಮುಂಬೈಕರ್ ಮತ್ತು ಕಿಶೋರ್ ಪಾಂಡುರಂಗ್ ಬೆಲೆಕರ್ ನಿರ್ದೇಶನದ ಗಾಂಧಿ ಮಾತುಕತೆ ಎಂಬ ಮೂಕ ಚಿತ್ರ ಸಹ ಲಾಕ್​ಡೌನ್​​ನಲ್ಲಿ ಸಿಲುಕಿಕೊಂಡಿರುವುದರಿಂದ ಸೇತುಪತಿ ಅವರ ಬಾಲಿವುಡ್ ಚೊಚ್ಚಲ ಚಿತ್ರ ಯಾವುದು ಎಂದು ಸ್ಪಷ್ಟವಾಗಿಲ್ಲ.

ABOUT THE AUTHOR

...view details