ಕರ್ನಾಟಕ

karnataka

ETV Bharat / sitara

ಬಾಲಿವುಡ್ ನಟಿಗೆ ಕಾಂಗ್ರೆಸ್ ಗಾಳ... ರಾಹುಲ್ ಸಮ್ಮುಖದಲ್ಲಿ 'ಕೈ' ಹಿಡಿದ ಉರ್ಮಿಳಾ

ಬಾಲಿವುಡ್​ ನಟಿ ಉರ್ಮಿಳಾ ಕೊನೆಗೂ 'ಕೈ' ಹಿಡಿದಿದ್ದಾರೆ. ಇವರು ಮುಂಬೈನ ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ.

By

Published : Mar 28, 2019, 8:10 AM IST

ಕಾಂಗ್ರೆಸ್​ ಸೇರಿದ ಬಾಲಿವುಡ್ ನಟಿ ಉರ್ಮಿಳಾ

ಮುಂಬೈ: ಬಾಲಿವುಡ್ ನಟಿ ಉರ್ಮಿಳಾ ಮಾರ್ತೋಂಡ್ಕರ್​ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಿನ್ನೆ ಅಧಿಕೃತವಾಗಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರಿದ್ದಾರೆ.

ಕಳೆದ ಒಂದು ವಾರದಿಂದ ಉರ್ಮಿಳಾ ರಾಜಕೀಯ ಎಂಟ್ರಿ ವಿಚಾರ ಮುನ್ನೆಲೆಗೆ ಬಂದಿತ್ತು. ಕೆಲ ಕೈ​ ನಾಯಕರು ಉರ್ಮಿಳಾ ಅವರನ್ನು ಭೇಟಿಯಾಗಿ, ಪಕ್ಷಕ್ಕೆ ಆಹ್ವಾನಿಸಿದ್ದರು. ಉರ್ಮಿಳಾ ಕೂಡ ಕಳೆದ ವಾರ ಮುಂಬೈ ನಗರ ಘಟಕದ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಸಂಜಯ್ ನಿರೂಪಮ್​​ ಜತೆ ಮಾತುಕತೆ ನಡೆಸಿದ್ದರು. ಇದೀಗ ಅಧಿಕೃತವಾಗಿ ಕಾಂಗ್ರೆಸ್​ಗೆ ಎಂಟ್ರಿಯಾಗಿದ್ದು, ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಜಂಪ್ ಮಾಡಿದ್ದಾರೆ.

ಇನ್ನು ತಮ್ಮ ಹೊಸ ಇನ್ನಿಂಗ್ಸ್ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿರುವ ಉರ್ಮಿಳಾ, ನಮ್ಮ ದೇಶದ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕತೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷಕ್ಕೆ ನನ್ನನ್ನು ಸ್ವಾಗತಿಸಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಇನ್ನು ಉರ್ಮಿಳಾ ಮುಂಬೈನ ಉತ್ತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಸದ್ಯ ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಹಿಡಿತದಲ್ಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​​​ನ ಸಂಜಯ್ ನಿರೂಪಮ್ ಅವರಿಗೆ ಶೆಟ್ಟಿ ಸೋಲಿನ ರುಚಿ ತೋರಿಸಿದ್ದರು.

ಉರ್ಮಿಳಾ 1977 ರಲ್ಲಿ ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ನಂತರ ನಟ ಆಮೀರ್ ಖಾನ್ ಅವರ ಜತೆ ರಂಗೀಲಾ, ಇಂಡಿಯನ್​, ಸತ್ಯಾ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details