ಬಾಲಿವುಡ್ ನಟಿ ಆಲಿಯಾ ಭಟ್ ಬಹು ಬೇಡಿಕೆ ನಟಿಯಲ್ಲೊಬ್ಬರು. ಚಿಕ್ಕ ವಯಸ್ಸಿನಲ್ಲೇ ತನ್ನ ಅಭಿನಯದಿಂದ ಹಿಂದಿ ಚಿತ್ರರಂಗದಲ್ಲಿ ಭಾರಿ ಹೆಸರು ಗಳಿಸಿದ್ದಾರೆ. ಜೊತೆಗೆ ದೊಡ್ಡ ಅಭಿಮಾನಿ ಬಳವನ್ನೂ ಸಂಪಾದಿಸಿದ್ದಾರೆ.
ಆಲಿಯಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಅವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿರುತ್ತಾರೆ.
ಇದೀಗ ವಿಭಿನ್ನ ರೀತಿಯ ಫೋಟೋಶೂಟ್ ಮಾಡಿಸಿರುವ ಆಲಿಯಾ ಸಖತ್ ಸುದ್ದಿಯಲ್ಲಿದ್ದಾರೆ. ಹೌದು, ಬಾತ್ಟಬ್ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಬಿಳಿ ಬಣ್ಣದ ಸುಂದರ ಮಿನಿ ಡ್ರೆಸ್ನಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.