ಆದಿತ್ಯ, 2004 ರಿಂದ 2009 ರ ಅವಧಿಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಹಿಂದೆಯೇ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಲು ಯತ್ನಸಿದ್ದೆ. ಈ ವೇಳೆಯಲ್ಲೆಲ್ಲ ಆತ ನನ್ನ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದ. ಅಷ್ಟೇ ಅಲ್ಲದೆ ನನ್ನ ಖಾಸಗಿ ಪೋಟೊಗಳನ್ನು ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್ ಮೇಲೆ ಮಾಡಿ ₹1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಅದರಲ್ಲಿ ಈಗಾಗಲೇ 50 ಲಕ್ಷ ಹಣ ಕೊಟ್ಟಿದ್ದೇನೆ ಎಂದು ನಟಿಯೊಬ್ಬಳು ಮುಂಬೈನ ಸಬ್ ಅರ್ಬನ್ ವರ್ಸೊವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಟಿ ಮೇಲೆ ರೇಪ್ ಆರೋಪ... ಬಾಲಿವುಡ್ ನಟನ ವಿರುದ್ಧ ಎಫ್ಐಆರ್
ನಟಿ ಮೇಲೆ ಅತ್ಯಾಚಾರದ ಪ್ರಕರಣದಡಿ ಬಾಲಿವುಡ್ ನಟ ಆದಿತ್ಯಾ ಪಂಚೊಲಿ ವಿರುದ್ಧ ಮುಂಬೈನ ವರ್ಸೊವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಿವುಡ್ ನಟ
36 ವಯಸ್ಸಿನ ಈ ನಟಿಯ ದೂರಿನ ಮೇರೆಗೆ ಆದಿತ್ಯಾ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 323 (ಹಲ್ಲೆ) ಹಾಗೂ 384 (ಹಣ ಸುಲಿಗೆ)ನಡಿ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ಡಿಸಿಪಿ ಮಂಜುನಾಥ್ ತಿಳಿಸಿದ್ದಾರೆ.
ಇನ್ನು ತಮ್ಮ ವಿರುದ್ಧ ಆತ್ಯಾಚಾರ ಆರೋಪವನ್ನು ಆದಿತ್ಯ ಅಲ್ಲಗಳೆದಿದ್ದಾನೆ. ಉದ್ದೇಶಪೂರ್ವಕವಾಗಿ ನನ್ನನ್ನು ಇದರಲ್ಲಿ ಸಿಲುಕಿಸಲಾಗುತ್ತಿದೆ. ಇದು ಪೂರ್ವಯೋಜಿತ ಸಂಚು ಎಂದು ಆತ ಹೇಳಿದ್ದಾನೆ.