ಕರ್ನಾಟಕ

karnataka

ETV Bharat / sitara

ನಟಿ ಕಂಗನಾ ಕಚೇರಿ ಹಾನಿ 2 ಕೋಟಿ ಅನ್ನೋದು ಸುಳ್ಳು.. ಮುಂಬೈ ಕೋರ್ಟ್‌ಗೆ ಬಿಎಂಸಿ ಅಫಿಡವಿಟ್ - ಕಚೇರಿ ನೆಲಸಮದಿಂದ 2 ಕೋಟಿ ನಷ್ಟ ಅನ್ನೋದು ಸುಳ್ಳು

ಈ ಹಿಂದೆ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಮೊದಲ ಅಫಿಡವಿಟ್‌ನಲ್ಲಿ ಕಾನೂನು ನಿಮಯಗಳನ್ನು ಮೀರಿ ಕಚೇರಿ ನಿರ್ಮಿಸಿಕೊಂಡಿದ್ದಾರೆ. ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ನಿಮಯಗಳನ್ನು ಮೀರಿ ಕಟ್ಟಡಕ್ಕೆ ಪ್ಲಾನ್‌ ರೂಪಿಸಿದ್ದಾರೆ. ಕಂಗನಾ ಮಾಡುತ್ತಿರುವ ಎಲ್ಲಾ ಆರೋಪಗಳು ಆಧಾರ ರಹಿತ ಎಂದು ಕೋರ್ಟ್‌ಗೆ ಬಿಎಂಸಿ ಹೇಳಿತ್ತು..

bmc-files-another-affidavit-against-kangana-ranauts-plea-against-demolition-of-her-office
ಕಂಗಾನ ಕಚೇರಿಗೆ ಹಾನಿಯಿಂದ 2 ಕೋಟಿ ನಷ್ಟ ಅನ್ನೋದು ಸುಳ್ಳು ‌; ಮುಂಬೈ ಕೋರ್ಟ್‌ಗೆ ಬಿಎಂಸಿ ಅಫಿಡವಿಟ್

By

Published : Sep 19, 2020, 4:23 PM IST

ಮುಂಬೈ :ಕಂಗನಾ ರಣಾವತ್‌ ಮುಂಬೈ ಕಚೇರಿ ನೆಲಮಸಕ್ಕೆ ಮುಂದಾಗಿದ್ದ ಪ್ರಕರಣ ಸಂಬಂಧ ಕಂಗನಾ ವಿರುದ್ಧ ಬೃಹನ್‌ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್(ಬಿಎಂಸಿ)‌ ಮುಂಬೈ ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದೆ. ಕಚೇರಿಗೆ ಹಾನಿಯಾಗಿರುವುದರಿಂದ 2 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಗನಾ ಕೋರ್ಟ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

ಆಕೆ ಮಾಡಿರುವ ಈ ಆರೋಪ ಭೋಗಸ್‌ ಎಂದು ಬಿಎಂಸಿ ಮತ್ತೊಂದು ಅಫಿಡವಿಟ್‌ ಸಲ್ಲಿಸಿದೆ. ಕಂಗನಾ ಸತ್ಯಾಂಶವನ್ನು ಮರೆಮಾಚಿದ್ದಾರೆ. ಈಕೆ ಯಾವುದೇ ಪರಿಹಾರಕ್ಕೆ ಅರ್ಹಳಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಮೊದಲ ಅಫಿಡವಿಟ್‌ನಲ್ಲಿ ಕಾನೂನು ನಿಮಯಗಳನ್ನು ಮೀರಿ ಕಚೇರಿ ನಿರ್ಮಿಸಿಕೊಂಡಿದ್ದಾರೆ. ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ನಿಮಯಗಳನ್ನು ಮೀರಿ ಕಟ್ಟಡಕ್ಕೆ ಪ್ಲಾನ್‌ ರೂಪಿಸಿದ್ದಾರೆ. ಕಂಗನಾ ಮಾಡುತ್ತಿರುವ ಎಲ್ಲಾ ಆರೋಪಗಳು ಆಧಾರ ರಹಿತ ಎಂದು ಕೋರ್ಟ್‌ಗೆ ಬಿಎಂಸಿ ಹೇಳಿತ್ತು.

ವಾದ, ಪ್ರತಿವಾದ ಆಲಿಸಿರುವ ಕೋರ್ಟ್‌ ವಿಚಾರಣೆಯನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿದೆ. ಮುಂಬೈ ಕೋರ್ಟ್‌ ಕಂಗನಾ ರಣಾವತ್‌ ಅವರ ಮುಂಬೈ ಕಚೇರಿಯನ್ನು ಬಿಎಂಸಿ ನೆಲಸಮ ಮಾಡಲು ಮುಂದಾಗಿತ್ತು. ಇದಕ್ಕೆ ನ್ಯಾಯಾಲಯ ತಡೆ ನೀಡಿತ್ತು. ಕಚೇರಿ ಕಟ್ಟಡ ನೆಲಸಮ ಮಾಡುವುದಕ್ಕೆ ತಡೆ ಕೋರಿ ತಮ್ಮ ವಕೀಲ ರಿಜ್ವಾನ್‌ ಸಿದ್ದಿಕಿ ಅವರ ಮೂಲಕ ಕಂಗನಾ ಕೋರ್ಟ್‌ ಮೆಟ್ಟಿಲೇರಿದ್ದರು.

ABOUT THE AUTHOR

...view details