ಕರ್ನಾಟಕ

karnataka

ETV Bharat / sitara

ತಮಿಳು ನಿರ್ದೇಶಕ ಅಟ್ಲಿ ಮುಂದಿನ ಚಿತ್ರದಲ್ಲಿ ಶಾರುಖ್-ನಯನತಾರ - ಕಾಜಲ್ ಅಗರ್ವಾಲ್

ತಮಿಳಿನ ಪ್ರತಿಭಾವಂತ ನಿರ್ದೇಶಕ​ ಅಟ್ಲಿ ಇದೀಗ ಬಾಲಿವುಡ್ ನಟ ಶಾರುಖ್ ಖಾನ್​ ಅವರಿಗೆ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಹೀರೋಯಿನ್ ಆಗಿ ಸೂಪರ್​ಸ್ಟಾರ್ ನಯನತಾರ ನಟಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

Sidharth Shukla will be cremated in an electric crematorium
ಅಟ್ಲಿ ಮುಂದಿನ ಹೆಸರಿಡದ ಚಿತ್ರದಲ್ಲಿ ಶಾರುಖ್-ನಯನತಾರ

By

Published : Sep 3, 2021, 4:06 PM IST

ನವದೆಹಲಿ:ಕಳೆದೆರಡು ವರ್ಷಗಳಿಂದಬಾಲಿವುಡ್​​ ನಟ ಶಾರುಖ್ ಖಾನ್ ಅಭಿನಯದ ಯಾವುದೇ ಸಿನಿಮಾ ತೆರೆ ಕಂಡಿಲ್ಲ. ಆದರೆ ಅವರ ಮುಂದಿನ ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸುತ್ತಿದ್ದಾರೆ.

ಈ ಸಿನಿಮಾಗೆ ಇನ್ನೂ ಟೈಟಲ್​ ಫಿಕ್ಸ್ ಆಗಿಲ್ಲ. ಶಾರುಖ್ ಸದ್ಯ ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದ ಶೂಟಿಂಗ್​ನಲ್ಲಿದ್ದಾರೆ.

ಈ ಚಿತ್ರದಲ್ಲಿ ಶಾರುಖ್ ತಂದೆ ಹಾಗೂ ಮಗನ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್​ ನಟರು ಕೂಡಾ ಇದೇ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. 2019ರಲ್ಲಿ ತೆರೆಕಂಡ ವಿಜಯ್ ನಟನೆಯ ‘ಬಿಗಿಲ್’ ಚಿತ್ರದಲ್ಲಿ ಟೈಗರ್ ಶ್ರಾಫ್ ನಟಿಸಿದ್ದರು.

ಇದಕ್ಕೂ ಮೊದಲೇ ತಮ್ಮ ಚೊಚ್ಚಲ ನಿರ್ದೇಶನದ ಮರ್ಸೆಲ್ ಚಿತ್ರದಲ್ಲಿ ವಿಜಯ್ ಜೊತೆಯಾಗಿ ಸಮಂತಾ ಅಕ್ಕಿನೇನಿ ಮತ್ತು ಕಾಜಲ್ ಅಗರ್ವಾಲ್ ನಟಿಸಿದ್ದರು. ಆದರೆ ಅಟ್ಲಿ ಯಾವುದೇ ಬಾಲಿವುಡ್ ಸ್ಟಾರ್ ನಟರಿಗೆ ಪೂರ್ಣ ಪ್ರಮಾಣದಲ್ಲಿ ಆ್ಯಕ್ಷನ್ ಕಟ್ ಹೇಳಿರಲಿಲ್ಲ.

ಇದನ್ನೂ ಓದಿ: Drugs case: ಇ.ಡಿ ವಿಚಾರಣೆಗೆ ಹಾಜರಾದ ನಟಿ ರಕುಲ್ ಪ್ರೀತ್ ಸಿಂಗ್

ABOUT THE AUTHOR

...view details