ಮುಂಬೈ: ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ನಡುವಿನ ಲವ್ವಿ - ಡವ್ವಿ ವಿಚಾರ ಎಲ್ಲರಿಗೂ ಗೊತ್ತಿದೆ. ಇಷ್ಟು ದಿನ ಈ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ, ಇದೇ ಮೊದಲ ಸಲ ಇಬ್ಬರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ.
ಆಥಿಯಾ ಶೆಟ್ಟಿ ಸಹೋದರ ಆಹನ್ ಶೆಟ್ಟಿ ಹಾಗೂ ನಟಿ ತಾರಾ ಸುತಾರಿಯಾ ಒಟ್ಟಿಗೆ ನಟನೆ ಮಾಡಿರುವ ತಡಪ್ ಚಿತ್ರದ ಸ್ಕ್ರೀನಿಂಗ್ ವೇಳೆ, ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಈ ಮೂಲಕ ಇಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಇದನ್ನೂ ಓದಿರಿ:ಮಹಿಳಾ ಪಿಎಂ ಸ್ವೀಕರಿಸಲು ನಾವು ಸಿದ್ಧ: ಮಮತಾ ಬ್ಯಾನರ್ಜಿ ಕಾರ್ಯಕ್ರಮದಲ್ಲಿ ನಟಿ ರಿಚಾ ಚಡ್ಡಾ ಹೇಳಿಕೆ!
ಕಳೆದ ಕೆಲ ದಿನಗಳ ಹಿಂದೆ ತಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನ ಖುದ್ದಾಗಿ ರಾಹುಲ್ ಬಹಿರಂಗಪಡಿಸಿದ್ದರು. ಆಥಿಯಾ ಹುಟ್ಟುಹಬ್ಬದ ವೇಳೆ 'ಹ್ಯಾಪಿ ಬರ್ತಡೇ ಮೈ ಲವ್' ಎಂದು ಪೋಸ್ಟ್ ಮಾಡಿದ್ದರು. ಇದಾದ ಬಳಿಕ ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದ ವೇಳೆ ಮೈದಾನಕ್ಕೆ ಆಗಮಿಸಿದ್ದ ಆಥಿಯಾ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದರು.
ಆಥಿಯಾ ಶೆಟ್ಟಿ ಸಹೋದರ ಆಹನ್ ಹಾಗೂ ತಾರಾ ನಟನೆ ಮಾಡಿರುವ ತಡಪ್ ಚಿತ್ರ ಡಿಸೆಂಬರ್ 3ರಂದು ತೆರೆಗೆ ಬರಲಿದ್ದು, 2018ರಲ್ಲಿ ರಿಲೀಸ್ ಆಗಿದ್ದ ತೆಲಗು RX 100 ಚಿತ್ರದ ರಿಮೇಕ್ ಆಗಿದೆ.