ಮುಂಬೈ: ಪುರುಷ ಮತ್ತು ಮಹಿಳೆಯ ನಡುವಿನ ಪ್ರತಿಯೊಂದು ಸಂಬಂಧವೂ ಪ್ರಣಯದಿಂದ ಕೂಡಿರುವುದಿಲ್ಲ ಎಂದು ನಟ ಅರ್ಜುನ್ ಕಪೂರ್ ಹೇಳಿದ್ದಾರೆ.
ಅವರ ಇತ್ತೀಚಿನ ಚಿತ್ರ "ಸಂದೀಪ್ ಔರ್ ಪಿಂಕಿ ಫಾರಾರ್" ಬಗ್ಗೆ ಮಾತನಾಡಿ, ಪ್ರೀತಿಯಿಲ್ಲದ ವಾಸ್ತವ ಜಗತ್ತನ್ನು ಚಿತ್ರಿಸಲು ಪ್ರಯತ್ನಿಸಲಾಗಿದೆ. ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರವು ಪ್ರಣಯಕ್ಕಿಂತ ಹೆಚ್ಚಿನ ಗೌರವದ ವಿಚಾರಗಳಿಗೆ ಮಹತ್ವ ನೀಡುತ್ತದೆ ಎಂದು ಅರ್ಜುನ್ ಹೇಳಿದ್ದಾರೆ
ಕಲಾವಿದರಾಗಿ ನಾವು ಯಾವಾಗಲೂ ವಿಭಿನ್ನವಾಗಿ ಏನನ್ನಾದರೂ ಮಾಡಬೇಕೆಂದು ಹೇಳುತ್ತೇವೆ. ಸಿನಿಮಾ ಲವ್ ಸ್ಟೋರಿಯಾದಾಗ ಬಹಳಷ್ಟು ವಿಚಾರಗಳು ಮಿಕ್ಸ್ ಆಗುತ್ತವೆ. ಹಾಗೆ ಪ್ರೀತಿ, ಪ್ರಣಯ ಬೆಳವಣಿಗೆಯನ್ನು ವಿವರಿಸುವುದಕ್ಕೇ ಫೋಕಸ್ ನೀಡಬೇಕಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮಹಿಳೆಯರು ಮತ್ತು ಪುರುಷರಿಗೆ ಭಿನ್ನ ರೀತಿಯಲ್ಲಿ ಅವರ ಭಾವನೆ, ಸಂಬಂಧದಲ್ಲಿ ಉಳಿಯಲು ಬಿಡಬೇಕು. ಆದರೆ, ಗೌರವ ಸಮಾನವಾಗಿರಬೇಕು. ಬಹಳಷ್ಟು ಸಲ ಪ್ರೀತಿಯಲ್ಲಿದ್ದಾಗ ಗೌರವಿಸುವುದು ಮರೆತು ಹೋಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.