ಹೈದರಾಬಾದ್ :ಬಾಲಿವುಡ್ ತಾರೆ ಅರ್ಜುನ್ ಕಪೂರ್ ತಮ್ಮ ಪಾರ್ಟ್ನರ್ ಮಲೈಕಾ ಅರೋರಾ ಕ್ಲಿಕ್ ಮಾಡಿದ ತಮ್ಮ ಹುಟ್ಟುಹಬ್ಬದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅರ್ಜುನ್ ಈ ಫೋಟೋಗಾಗಿ ಮಲೈಕಾಗೆ ಫೊಟೋ ಕ್ರೆಡಿಟ್ ನೀಡಿದ್ದು, ಅವಳು ನನ್ನನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಅರ್ಜುನ್ ಕಪೂರ್ ಜೂನ್ 26 ರಂದು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದು, ತನ್ನ ಗೆಳೆಯರಿಗಾಗಿ ಅವರು ಅದ್ದೂರಿ ಪಾರ್ಟಿ ಆಯೋಜಿಸಿದ್ದರು. ಇದರಲ್ಲಿ ಅವರ ಸಹೋದರಿಯರಾದ ಅನ್ಶುಲಾ ಕಪೂರ್, ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಕೂಡ ಭಾಗವಹಿಸಿದ್ದರು.