ಮುಂಬೈ (ಮಹಾರಾಷ್ಟ್ರ):ವಿಜಯ್ ಗುಟ್ಟೆ ಅವರ ಮುಂಬರುವ ವೆಬ್ ಸೀರಿಸ್ 'ಲೆಗಸಿ'ಯಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಮತ್ತು ನಟಿ ರವೀನಾ ಟಂಡನ್ ಮೊದಲ ಬಾರಿಗೆ ಪರದೆಯ ಮೇಲೆ ಪ್ರತಿಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವೀಟರ್ನಲ್ಲಿ ಮೇಲೆ ಹೆಸರಿಸಲಾದ ಮೂವರ ಫೋಟೋಗಳೊಂದಿಗೆ ಲೆಗಸಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಷಯ್ ಖನ್ನಾ ಮತ್ತು ರವೀನಾ ಟಂಡನ್ ಲೆಗಸಿ ವೆಬ್ ಸೀರಿಸ್ನಲ್ಲಿ ಮೊದಲ ಬಾರಿ ಒಟ್ಟಿಗೆ ಪಾತ್ರ ವಹಿಸಲಿದ್ದಾರೆ. ವಿಜಯ್ ಗುಟ್ಟೆ ನಿರ್ದೇಶನದ ವೆಬ್ ಸೀರಿಸ್ 2021ರ ಕೊನೆಯಲ್ಲಿ ಪ್ರಾರಂಭವಾಗಲಿದೆ.