ಕರ್ನಾಟಕ

karnataka

ETV Bharat / sitara

ಜಾಹೀರಾತು ತಂದಿದೆಯಂತೆ ಕ್ಯಾನ್ಸರ್​... ಇದಕ್ಕೆ ಕಾರಣ ಅಜಯ್​ ದೇವಗನ್ನೇ​ ಎಂದನು ಆ ಅಭಿಮಾನಿ - ಅಜಯ್​ ದೇವಗನ್

ಕೆಟ್ಟ ಮೇಲೆ ಬುದ್ಧಿ ಬಂತು ಎನ್ನೋ ಸ್ಥಿತಿ ಈ ಅಭಿಮಾನಿಗೆ ಬಂದಿದೆ. ಕ್ಯಾನ್ಸರ್​ ರೋಗ ಅಂಟಿಸಿಕೊಂಡು ಪರಿತಪಿಸುತ್ತಿರುವ ಈತ, ಈ ರೀತಿ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಜಾಹೀರಾತು ಮಾಡದಂತೆ ಅಜಯ್ ದೇವಗನ್ ಅವರಿಗೆ ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : May 6, 2019, 12:49 PM IST

Updated : May 6, 2019, 1:11 PM IST

ಚಲನಚಿತ್ರಗಳ ನಟ-ನಟಿಯರು ಸಾಕಷ್ಟು ಅಭಿಮಾನಿಗಳಿಗೆ ರೋಲ್​ ಮಾಡೆಲ್ ಆಗಿರುತ್ತಾರೆ. ಸಿನಿಮಾಗಳಲ್ಲಿ ತಾರೆಯರ ಉಡುಗೆ - ತೊಡುಗೆಯಿಂದ ಹಿಡಿದು, ಅವರ ಸ್ಟಂಟ್​, ಸ್ಟೈಲ್​​​ಗಳನ್ನು ಫ್ಯಾನ್ಸ್​ ಫಾಲೋವ್​ ಮಾಡ್ತಾರೆ. ಹೀಗೆ ನಟರನ್ನು ಅನುಸರಿಸಲು ಹೋಗಿ ತಮ್ಮ ಜೀವಕ್ಕೆ ಕುಂದು ತಂದುಕೊಂಡವರೂ ಸಾಕಷ್ಟು ಜನರಿದ್ದಾರೆ.

ಇದೀಗ ಬಾಲಿವುಡ್​ ನಟ ಅಜಯ್​ ದೇವಗನ್​ ಅಭಿಮಾನಿ ನಾನಕ್ರಮ್ ಮೀನಾ ಎಂಬಾತ ಕ್ಯಾನ್ಸರ್​​​ ಖಾಯಿಲೆಯಿಂದ ಬಳಲುತ್ತಿದ್ದಾನೆ. ಅತಿಯಾದ ಪಾನ್ ಮಸಾಲಾ ಸೇವನೆಯೇ ಈತನ ಈ ದುಃಸ್ಥಿತಿಗೆ ಕಾರಣ. ರಾಜಸ್ಥಾನದ ನಾನಕ್ರಮ್ ಕಳೆದ ಕೆಲ ವರ್ಷಗಳಿಂದ ಬಾಲಿವುಡ್​ ಜನಪ್ರಿಯ ನಟ ಅಜಯ್​ ಜಾಹೀರಾತು ಮಾಡಿರುವ ಬ್ರ್ಯಾಂಡ್​​ನ ಪಾನ್ ಮಸಾಲಾ ಸೇವಿಸುತ್ತಿದ್ದ. ಈತ ದೇವಗನ್​ ಅವರ ಕಟ್ಟಾ ಅಭಿಮಾನಿ. 40 ವರ್ಷ ವಯಸ್ಸಿನ ನಾನಕ್ರಮ್​​ನಿಗೆ ಕ್ಯಾನ್ಸರ್​ ಇರುವ ವಿಚಾರ ಇತ್ತೀಚೆಗೆ ಗೊತ್ತಾಗಿದೆ. ಮತ್ತೊಂದು ದುರದೃಷ್ಟಕರ ವಿಚಾರ ಏನಂದ್ರೆ ಈತನ ಫ್ಯಾಮಿಲಿ ಕೂಡ ಪಾನ್ ಮಸಾಲಾ ವ್ಯಸನಿಯಾಗಿದೆ.

ಕೆಟ್ಟ ಮೇಲೆ ಬುದ್ಧಿ ಬಂತು ಎನ್ನೋ ಸ್ಥಿತಿ ಈ ಅಭಿಮಾನಿಗೆ ಬಂದಿದೆ. ಕ್ಯಾನ್ಸರ್​ ರೋಗ ಅಂಟಿಸಿಕೊಂಡು ಪರಿತಪಿಸುತ್ತಿರುವ ಈತ, ಈ ರೀತಿ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಜಾಹೀರಾತು ಮಾಡದಂತೆ ಅಜಯ್ ದೇವಗನ್ ಅವರಿಗೆ ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿದ್ದಾರೆ. ಸುಮಾರು 1000 ಕರಪತ್ರಗಳಲ್ಲಿ ಪಾನ್ ಮಸಾಲಾ ಸೇವನೆಯಿಂದ ನಲುಗುತ್ತಿರುವ ತಮ್ಮ ಕುಟುಂಬದ ದುಃಸ್ಥಿತಿ ಬಗ್ಗೆ ಮುದ್ರಿಸಿ, ಪ್ರಮುಖ ನಗರಗಳ ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸುತ್ತಿದ್ದಾನೆ.

'ಕೆಲ ವರ್ಷಗಳಿಂದ ನನ್ನ ತಂದೆ ತಂಬಾಕಿಗೆ ದಾಸನಾದ. ಅದರಲ್ಲೂ ತನ್ನ ನೆಚ್ಚಿನ ನಟ ಅಜಯ್ ದೇವಗನ್ ಪ್ರಚಾರ ಮಾಡುತ್ತಿದ್ದ ಬ್ರ್ಯಾಂಡ್​​ನ್ನೇ ಸೇವಿಸುತ್ತಿದ್ದ. ಯಾವಾಗ ಆತನಿಗೆ ಕ್ಯಾನ್ಸರ್​​ ಬಗ್ಗೆ ಗೊತ್ತಾಯಿತೋ, ದೊಡ್ಡ ನಟರು ಈ ರೀತಿಯ ವಸ್ತುಗಳ ಜಾಹೀರಾತು ಮಾಡಬಾರದು ಎಂದು ಆತನಿಗೆ ಮನವರಿಕೆ ಆಗಿದೆ' ಎಂದು ನಾನಕ್ರಮ್​ ಮಗ ದಿನೇಶ್ ಮೀನಾ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ.

ಇನ್ನು ಇಬ್ಬರು ಮಕ್ಕಳ ತಂದೆ ನಾನಕ್ರಮ್ ಟೀ ಮಾರಿ ಜೀವನ ಸಾಗಿಸುತ್ತಿದ್ದ. ಆದರೆ, ಕ್ಯಾನ್ಸರ್​ನಿಂದ ಮಾತು ಹೊರಡದೇ ಇದ್ದಾಗ ಮನೆಯಲ್ಲಿ ಕುಳಿತು ಹಾಲು ಮಾರುತ್ತಿದ್ದಾನೆ.

Last Updated : May 6, 2019, 1:11 PM IST

ABOUT THE AUTHOR

...view details