ಕರ್ನಾಟಕ

karnataka

By

Published : May 13, 2020, 3:52 PM IST

ETV Bharat / sitara

ಬಾಲಿವುಡ್​​ನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಉತ್ಸುಕರಾದ ನಟಿ ಪ್ರಿಯಾಮಣಿ

ಪಂಚಭಾಷಾ ನಟಿ ಪ್ರಿಯಾಮಣಿ ಬಾಲಿವುಡ್​​ನಲ್ಲಿ ಕೂಡ ತಮ್ಮ ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಚೆನ್ನೈ ಎಕ್ಸ್‌ಪ್ರೆಸ್‌ನ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಪ್ರಿಯಾಮಣಿ ಈಗ ಅಜಯ್​ ದೇವಗನ್​ ಜೊತೆ ಮೈದಾನ್​​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

after-family-man-priyamani-aims-to-expand-career-in-hindi-film-industry
ಬಾಲಿವುಡ್​​ನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಉತ್ಸುಕರಾದ ನಟಿ ಪ್ರಿಯಾಮಣಿ

ಮುಂಬೈ:ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಪ್ರಿಯಾಮಣಿ ಬಾಲಿವುಡ್​​ಗೂ ತಮ್ಮ ಸಿನಿಮಾ ವೃತ್ತಿಜೀವನವನ್ನು ವಿಸ್ತರಿಸಲು ಆಸಕ್ತಿ​​ ತೋರಿಸಿದ್ದಾರೆ.

ಪಂಚಾಭಾಷಾ ತಾರೆ ಎಂದೇ ಕರೆಯಲ್ಪಡುವ ಪ್ರಿಯಾಮಣಿ ದಿ ಫ್ಯಾಮಿಲಿ ಮ್ಯಾನ್​ನಂತಹ ವೆಬ್​ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ರು. 2013 ರಲ್ಲಿ ಬಿಡುಗಡೆಯಾದ ಶಾರುಖ್​ ಖಾನ್​ ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್​​ಪ್ರೆಸ್​​​ನ ಸೂಪರ್​ ಹಿಟ್​ ಹಾಡೊಂದಕ್ಕೆ ಪ್ರಿಯಾಮಣಿ ಹೆಜ್ಜೆ ಹಾಕಿದ್ರು. ಹೀಗಾಗಿ ಉತ್ತಮ ಅವಕಾಶಗಳು ದೊರೆತರೆ ಹಿಂದಿ ಚಿತ್ರಗಳಲ್ಲಿ ಕೂಡ ತಮ್ಮ ಛಾಪು ಮೂಡಿಸಲು ಪ್ರಿಯಾಮಣಿ ಉತ್ಸುಕರಾಗಿದ್ದಾರೆ.

ಹಿಂದಿ ಚಿತ್ರ ನಿರ್ಮಾಪಕರು ನನಗೆ ಯಾವುದೇ ಪಾತ್ರ ಸೂಟ್​ ಆಗುತ್ತದೆ ಎಂದು ಅಂದುಕೊಂಡ್ರೆ ಅದು ನನಗೆ ಉತ್ತಮ ಅವಕಾಶವಾಗಲಿದೆ ಎಂದಿದ್ದಾರೆ. ಬಾಲಿವುಡ್​​ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ನಿಜ ಆದರೆ ತುದಿಗಾಲಲ್ಲಿ ನಿಂತಿಲ್ಲ. ಯಾಕೆಂದರೆ ನಾನು ಇದುವರೆಗೂ ಮಾಡಿರುವ ಸಿನಿಮಾ ಪಾತ್ರಗಳು, ವೆಬ್​ ಸಿರೀಸ್​​ ನನಗೆ ಸಾಕಷ್ಟು ತೃಪ್ತಿ ನೀಡಿವೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

ಹೆಚ್ಚಿನದಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಿದ ಈ ನಟಿ ರಾವನ್ ಮತ್ತು ರಕ್ತ ಚರಿತ್ರಾ -2ರಂತಹ ಬಹುಭಾಷಾ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ 1 2 3 4 ಗೆಟ್‌ ಆನ್‌ ಡ್ಯಾನ್ಸ್‌ ಫ್ಲೋರ್‌ ಸಾಂಗ್​​ನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಮುಂದೆ ಪ್ರಿಯಾಮಣಿ ಅಜಯ್​ ದೇವಗನ್​ ಜೊತೆ ಮೈದಾನ್​​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details