ನವದೆಹಲಿ:ಬಾಲಿವುಡ್ ನಟಿ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ಮೀರಾ ಚೋಪ್ರಾ, ದೆಹಲಿಯಲ್ಲಿ ತನ್ನ ತಂದೆಯ ಮೇಲೆ ದರೋಡೆಕೋರರು ಮುತ್ತಿಗೆ ಹಾಕಿ, ಚಾಕುವಿನಿಂದ ಬೆದರಿಸಿ ಮೊಬೈಲ್ ದೋಚಿರುವ ಬಗ್ಗೆ ತಮ್ಮ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೀರಾ ಚೋಪ್ರಾ, ನವದೆಹಲಿಯ ಮಾಡೆಲ್ ಟೌನ್ ಪ್ರದೇಶದ ಬಳಿ ತಮ್ಮ ತಂದೆ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ, ಚಾಕು ಹಿಡಿದು ಮುತ್ತಿಗೆ ಹಾಕಿದ ದರೋಡೆಕೋರರು ತಂದೆಯ ಮೊಬೈಲ್ ಫೋನ್ ಲೂಟಿ ಮಾಡಿದ್ದಾರೆ ಎಂದು ದೂರಿದ್ದಾರೆ.
ನನ್ನ ತಂದೆ ಪೊಲೀಸ್ ಕಾಲೊನಿಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಆ ವೇಳೆ ಇಬ್ಬರು ವ್ಯಕ್ತಿಗಳು ಸ್ಕೂಟರ್‌ನಲ್ಲಿ ಬಂದು, ಚಾಕು ತೋರಿಸಿ ಅವರ ಫೋನ್ ಕಸಿದುಕೊಂಡರು. ದೆಹಲಿ ಸುರಕ್ಷಿತ ಎಂದು ನೀವು ಹೇಳಿಕೊಳ್ಳುವುದನ್ನು ಇದು ತೋರಿಸುತ್ತದೆ ಎಂದು ತಮ್ಮ ಟ್ವೀಟ್ ಅನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಪೊಲೀಸ್ ಹಾಗೂ ದೆಹಲಿ ಪೊಲೀಸ್ ಕಮಿಷನರ್ಗೆ ಟ್ಯಾಗ್ ಮಾಡಿದ್ದಾರೆ.
ನಂತರ ಟ್ವೀಟ್ ಮಾಡಿರುವ ಅವರು ಈ ಬಗ್ಗೆ ಪ್ರಕರಣ ದಾಖಲಾದ ಎಫ್‌ಐಆರ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಕ್ಕಾಗಿ ನಟಿ ದೆಹಲಿ ಪೊಲೀಸರಿಗೆ ಧನ್ಯವಾದವನ್ನೂ ಇದೇ ವೇಳೆ ಅರ್ಪಿಸಿದ್ದಾರೆ.
ಇಂತಹ ತ್ವರಿತ ಕ್ರಮಕ್ಕಾಗಿ ಧನ್ಯವಾದ. ನಮ್ಮ ಪೊಲೀಸ್ ಇಲಾಖೆಯಿಂದ ನಾವು ರಕ್ಷಿಸಲ್ಪಟ್ಟಿದ್ದೇವೆಂದು ಭಾವಿಸಿದಾಗ ನನಗೆ ಹೆಮ್ಮೆಯಾಗುತ್ತದೆ. ನಮ್ಮಿಂದ ವಸ್ತುವೊಂದನ್ನು ದೋಚಿದ್ದಾರೆ ಎನ್ನುವುದಕ್ಕಿಂತ, ನಮ್ಮ ಹಿರಿಯರನ್ನು ರಕ್ಷಿಸುವುದು ಬಹಳ ಮುಖ್ಯ ಎಂದು ಮೀರಾ ಟ್ವೀಟ್ ಮಾಡಿದ್ದಾರೆ.