ಕರ್ನಾಟಕ

karnataka

ETV Bharat / sitara

ಆ್ಯಸಿಡ್​​​ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ. ದೇಣಿಗೆ ನೀಡಿದ ಬಾಲಿವುಡ್​ ನಟಿ ದೀಪಿಕಾ - ಆಸಿಡ್​ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ. ದೇಣಿಗೆ

ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ 10 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Deepika
Deepika

By

Published : Sep 3, 2021, 4:19 AM IST

Updated : Sep 3, 2021, 5:06 AM IST

ಮುಂಬೈ:ಕನ್ನಡತಿ, ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಆ್ಯಸಿಡ್​ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ ನೀಡಿ ಮಾನವೀಯತೆ ಮೆರೆದಿದ್ದಾರೆ. ಆ್ಯಸಿಡ್​​ ದಾಳಿಗೊಳಗಾಗಿ ಬದುಕಿ ಉಳಿದಿರುವ 25 ವರ್ಷದ ಬಾಲಾ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು, ಇದೀಗ ಶಸ್ತ್ರಚಿಕಿತ್ಸೆಗೋಸ್ಕರ ಈ ಹಣ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಮೂತ್ರಪಿಂಡ ವೈಫಲ್ಯದಿಂದ ದೆಹಲಿಯ ಸಫ್ದರ್​ಜಂಗ್​​ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಬಾಲಾ ಹೋರಾಟ ನಡೆಸಿದ್ದು, ಅವರ ಕಿಡ್ನಿ ಕಸಿ ಮಾಡಲು 16 ಲಕ್ಷ ರೂಪಾಯಿ ಅವಶ್ಯಕತೆ ಇದೆ. ಹೀಗಾಗಿ ಬಾಲಾ ಕೆಲಸ ಮಾಡುತ್ತಿದ್ದ ಶಿರೋಜ್ ಹ್ಯಾಂಗೌಟ್​ ಕೆಫೆ ಮ್ಯಾನೇಜ್​ಮೆಂಟ್​ ಅಭಿಯಾನ ಆರಂಭ ಮಾಡಿದ್ದು, ಇಲ್ಲಿಯವರೆಗೆ 10.83 ಲಕ್ಷ ರೂ. ಆರ್ಥಿಕ ಸಹಾಯ ಹರಿದು ಬಂದಿದೆ. ಇದೀಗ ನಟಿ ದೀಪಿಕಾ ಪಡುಕೋಣೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಆ್ಯಸಿಡ್​ ಸಂತ್ರಸ್ತೆ ಬಾಲಾ ನಟಿ ದೀಪಿಕಾ ಪಡುಕೋಣೆ ಜೊತೆ ಛಪಾಕ್​(Chhapaak) ಚಿತ್ರದಲ್ಲಿ ನಟನೆ ಸಹ ಮಾಡಿದ್ದಾರೆ.ಬಿಜ್ನೋರ್​ ನಿವಾಸಿಯಾಗಿರುವ ಬಾಲಾ ಕಾಮಿಡಿ ನೈಟ್ ವಿತ್​ ಕಪಿಲ್​ ಕಾರ್ಯಕ್ರಮಕ್ಕೂ ಹೋಗಿದ್ದಳು. ಬಾಲಾ ಅನಾರೋಗ್ಯದ ಸುದ್ದಿ ನಟಿ ದೀಪಿಕಾ ಪಡುಕೋಣೆಗೆ ಗೊತ್ತಾಗುತ್ತಿದ್ದಂತೆ ನೆರವಿಗೆ ದಾವಿಸಿದ್ದಾರೆ.

ಇದನ್ನೂ ಓದಿರಿ: ಆಫ್ರಿಕಾ ಮೇಲೆ ಲಂಕಾ ಸವಾರಿ... ಮೊದಲ ಏಕದಿನ ಪಂದ್ಯ ಗೆದ್ದ ಸಿಂಹಳೀಯರ ತಂಡ

2012ರಲ್ಲಿ ಹರ್ಕೇಶ್​ ಸಿಂಗ್​ ಬಾಲಾ ಮೇಲೆ ಕೌಟುಂಬಿಕ ದ್ವೇಷದ ಕಾರಣ ಆ್ಯಸಿಡ್​ ದಾಳಿ ಮಾಡಿದ್ದರು. ಈ ವೇಳೆ ಬಾಲಾ ಅಜ್ಜ ಸಾವನ್ನಪ್ಪಿದರೆ, ಇವಳು ಬದುಕುಳಿದಿದ್ದಳು. ಬಾಲಾ ಗಂಟಲು, ಕೈಗಳು ಹಾಗೂ ಮುಖ ಸುಟ್ಟು ಹೋಗಿದ್ದು, ಈಗಾಗಲೇ 12 ಶಸ್ತ್ರಚಿಕಿತ್ಸೆ ಮಾಡಲಾಗಿದೆ.

Last Updated : Sep 3, 2021, 5:06 AM IST

ABOUT THE AUTHOR

...view details