ಚೆನ್ನೈ (ತಮಿಳುನಾಡು): ಇನ್ನು ಆರು ದಿನಗಳಲ್ಲಿ 'ತಲೈವಿ' ಸಿನಿಮಾ ಬಿಡುಗಡೆಯಾಗಲಿದ್ದು, ಇದಕ್ಕೆ ಮುಂಚಿತವಾಗಿ ಇಂದು ನಟಿ ಕಂಗನಾ ರಣಾವತ್ ಅವರು ಚೆನ್ನೈನ ಮರೀನಾ ಬೀಚ್‌ನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಸ್ಮಾರಕಕ್ಕೆ ತೆರಳಿ ನಮಿಸಿದ್ದಾರೆ.
1991 ರಿಂ 2016ರ ವರೆಗೆ ಬರೋಬ್ಬರಿ ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ನಟಿ - ರಾಜಕಾರಣಿ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ತಲೈವಿ ಸೆಪ್ಟೆಂಬರ್ 10ರಂದು ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಾರೆ.