ಬಾಲಿವುಡ್ ನಟ ಅರುಣೋದಯ್ ಸಿಂಗ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪ್ರೀತಿಸಿ ಮದುವೆಯಾಗಿದ್ದ ಪ್ರೇಯಸಿಗೆ ಈ ನಟ ಡಿವೋರ್ಸ್ ಕೊಟ್ಟಿದ್ದಾರೆ.
2016 ರಲ್ಲಿ ಕೆನಡಾದ ಲೀ ಈಲ್ಟನ್ ಜತೆ ಅರುಣೋದಯ್ ಮ್ಯಾರೇಜ್ ಮಾಡಿಕೊಂಡಿದ್ದರು. ಲೀ, ಗೋವಾದಲ್ಲಿ ರೆಸ್ಟೊರೆಂಟ್ವೊಂದರ ಒಡತಿ. ಕೆಲ ವರ್ಷಗಳ ಹಿಂದೆ ಈ ಹೋಟೆಲ್ನಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಪರಸ್ಪರ ಡೇಟಿಂಗ್ನಲ್ಲಿದ್ದ ಈ ಜೋಡಿ, 2016ರಲ್ಲಿ ಮಧ್ಯಪ್ರದೇಶದ ಭೂಪಾಲ್ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ಬೇರೆಯಾಗುತ್ತಿದ್ದಾರೆ.