ಉಮರಿಯಾ :ಬಾಲಿವುಡ್ ನಟಿ ರವೀನಾ ಟಂಡನ್ ಮಧ್ಯಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಫ್ಯಾಮಿಲಿಯೊಂದಿಗೆ ಬಾಂಧವ್ಗಢ ಅರಣ್ಯಪ್ರದೇಶಕ್ಕೆ ಭೇಟಿ ನೀಡಿ ಹುಲಿ ಸಫಾರಿಯನ್ನ ಸಖತ್ ಎಂಜಾಯ್ ಮಾಡಿದ್ದಾರೆ.
ಸಫಾರಿ ವೇಳೆ ರವೀನಾ ಟಂಡನ್ ಕ್ಯಾಮೆರಾದಲ್ಲಿ ಸೆರೆಯಾದ 'ಭಜರಂಗ್'! - ಬಾಂಧವ್ಗಢದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಸಫಾರಿ!
ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರವೀನಾ ಟಂಡನ್, ‘ಭಜರಂಗ್ ರಸ್ತೆಗೆ ಬಂದ ಕೂಡಲೇ’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಆ ಹುಲಿ ರಸ್ತೆ ದಾಟವವರೆಗೂ ಡ್ರೈವರ್, ಟ್ರಕ್ ಚಲಾಯಿಸಲಿಲ್ಲ..
ನಟಿ ರವೀನಾ ಟಂಡನ್ ಸಫಾರಿ!
ಸಫಾರಿ ಮುಗಿಸಿ ಹಿಂದಿರುಗುವಾಗ, ಬಫರ್ ವಲಯದ ಬೀಚ್ ರಸ್ತೆಯಲ್ಲಿ ಭಜರಂಗ್ ಹೆಸರಿನ ಹುಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ನಟಿ ಅದನ್ನು ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರವೀನಾ ಟಂಡನ್, ‘ಭಜರಂಗ್ ರಸ್ತೆಗೆ ಬಂದ ಕೂಡಲೇ’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಆ ಹುಲಿ ರಸ್ತೆ ದಾಟವವರೆಗೂ ಡ್ರೈವರ್, ಟ್ರಕ್ ಚಲಾಯಿಸಲಿಲ್ಲ. ಕಾಡು ಪ್ರಾಣಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಇಂತಹ ಮಾರ್ಗಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.