ಸ್ಯಾನ್ ಫ್ರಾನ್ಸಿಸ್ಕೋ : ಕಾಲರ್ ಐಡೆಂಟಿಫಿಕೇಶನ್ ಆ್ಯಪ್ ಆಗಿರುವ ಟ್ರೂಕಾಲರ್ ಐಒಎಸ್ ಮತ್ತು ಆಂಡ್ರಾಯ್ಡ್ ಎರಡೂ ಬಳಕೆದಾರರಿಗೆ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ವಾಸ್ತವದಲ್ಲಿ ಎರಡೂ ಆಪರೇಟಿಂಗ್ ಸಿಸ್ಟಮ್‌ಗಳು ಸ್ಥಳೀಯವಾಗಿ ಕರೆಗಳನ್ನು ರೆಕಾರ್ಡಿಂಗ್ ಮಾಡದಂತೆ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುತ್ತವೆ. ಆದರೆ ಟ್ರೂಕಾಲರ್ ಮೀಸಲಾದ ರೆಕಾರ್ಡಿಂಗ್ ಲೈನ್‌ಗೆ ಕರೆ ಮಾಡುವ ಮೂಲಕ ಈ ನಿರ್ಬಂಧವನ್ನು ಬೈಪಾಸ್ ಮಾಡುತ್ತದೆ.
ಆ್ಯಂಡ್ರಾಯ್ಡ್ನಲ್ಲಿ, ಬಳಕೆದಾರರು Truecaller ನ ಡಯಲರ್‌ನಿಂದ ನೇರವಾಗಿ ಕಾಲ್ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಬಹುದು. ಬಳಕೆದಾರರು ಬೇರೊಂದು ಡಯಲರ್ ಬಳಸುತ್ತಿದ್ದರೆ ಟ್ರೂ ಕಾಲರ್ ಫ್ಲೋಟಿಂಗ್ ರೆಕಾರ್ಡಿಂಗ್ ಬಟನ್ ಅನ್ನು ತೋರಿಸುತ್ತದೆ. ಐಓಎಸ್ನಲ್ಲಿ ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ವಿಲೀನಗೊಳಿಸುವ ಮೂಲಕ ಬಳಕೆದಾರರು ಟ್ರೂ ಕಾಲರ್ ಅಪ್ಲಿಕೇಶನ್ ಮೂಲಕ ರೆಕಾರ್ಡಿಂಗ್ ಲೈನ್‌ಗೆ ಕರೆ ಮಾಡಬೇಕಾಗುತ್ತದೆ.
ಕರೆಯಲ್ಲಿರುವ ಇತರ ವ್ಯಕ್ತಿಗೆ ಕರೆ ರೆಕಾರ್ಡ್ ಆಗುತ್ತಿದೆ ಎಂಬುದನ್ನು ಸೂಚಿಸಲು ಬೀಪ್ ಶಬ್ದ ಕೇಳುತ್ತದೆ ಎಂದು ವರದಿ ತಿಳಿಸಿದೆ. 2018 ರಲ್ಲಿ ಟ್ರೂ ಕಾಲರ್ ಆ್ಯಂಡ್ರಾಯ್ಡ್ನಲ್ಲಿ ಪ್ರೀಮಿಯಂ ಬಳಕೆದಾರರಿಗೆ ಕರೆ ರೆಕಾರ್ಡಿಂಗ್ ಅನ್ನು ಪರಿಚಯಿಸಿತು ಮತ್ತು 2021 ರಲ್ಲಿ ಇದನ್ನು ಎಲ್ಲಾ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಲಭ್ಯಗೊಳಿಸಲಾಯಿತು. ಆದಾಗ್ಯೂ 2022 ರಲ್ಲಿ ಗೂಗಲ್ ತನ್ನ Accessibility API ಗೆ ಪ್ರವೇಶವನ್ನು ಸೀಮಿತಗೊಳಿಸಿತು. ಟ್ರೂ ಕಾಲರ್ ಸೇರಿದಂತೆ ಅನೇಕ ಅಪ್ಲಿಕೇಶನ್‌ಗಳು ಕರೆಗಳನ್ನು ರೆಕಾರ್ಡ್ ಮಾಡಲು ಇದನ್ನೇ ಬಳಸುತ್ತಿದ್ದವು. ಹೀಗಾಗಿ ಟ್ರೂ ಕಾಲರ್ ತನ್ನ ಅಪ್ಲಿಕೇಶನ್‌ಗಳಿಂದ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ತೆಗೆದುಹಾಕಬೇಕಾಯಿತು.