ಕರ್ನಾಟಕ

karnataka

ETV Bharat / science-and-technology

ಮಾನವರಿಗಿಂತ ಬುದ್ಧಿವಂತ 'Super Intelligence AI': ಇದೆಷ್ಟು ಅಪಾಯಕಾರಿ ಗೊತ್ತಾ?

ಸೂಪರ್ ಇಂಟೆಲಿಜೆಂಟ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಆವಿಷ್ಕರಿಸಲು ಮೈಕ್ರೋಸಾಫ್ಟ್ ಒಡೆತನದ OpenAI ಮುಂದಾಗಿದೆ. ಇದು ಮಾನವರ ಬುದ್ಧಿಶಕ್ತಿಯನ್ನು ಮೀರಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ವ್ಯವಸ್ಥೆಯಾಗಲಿದೆ.

OpenAI building new team to steer, control
OpenAI building new team to steer, control

By

Published : Jul 6, 2023, 7:46 PM IST

ಸ್ಯಾನ್ ಫ್ರಾನ್ಸಿಸ್ಕೋ : ತನ್ನ ಸೂಪರ್ ಇಂಟೆಲಿಜೆಂಟ್ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಉನ್ನತ ಮಷಿನ್​​ ಲರ್ನಿಂಗ್ ಸಂಶೋಧಕರು ಮತ್ತು ಎಂಜಿನಿಯರ್‌ಗಳ ತಂಡವನ್ನು ನಿಯೋಜಿಸುತ್ತಿರುವುದಾಗಿ ಮೈಕ್ರೋಸಾಫ್ಟ್ ಒಡೆತನದ OpenAI ಹೇಳಿದೆ. ಸೂಪರ್ ಇಂಟೆಲಿಜೆನ್ಸ್ ಪರಿಕಲ್ಪನೆಯು ವಿಭಿನ್ನ ಕೌಶಲ್ಯಗಳ ವ್ಯಾಪಕ ಶ್ರೇಣಿಯಲ್ಲಿ ಉತ್ತಮವಾಗಿರುವ ಒಂದು ಕಾಲ್ಪನಿಕ AI ಮಾಡೆಲ್ ಆಗಿದೆ. ಇದು ಕೆಲ ಹಿಂದಿನ ಪೀಳಿಗೆಯ ಒಂದೇ ಡೊಮೇನ್‌ ಮಾದರಿಗಿಂತ ಭಿನ್ನವಾಗಿವೆ.

ಓಪನ್‌ಎಐನ ಮುಖ್ಯ ವಿಜ್ಞಾನಿ ಮತ್ತು ಕಂಪನಿಯ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಇಲ್ಯಾ ಸುಟ್‌ಸ್ಕೇವರ್ ಮತ್ತು ಸಂಶೋಧನಾ ಲ್ಯಾಬ್‌ನ ಅಲೈನ್‌ಮೆಂಟ್ ಮುಖ್ಯಸ್ಥ ಜಾನ್ ಲೈಕ್ ಇವರು ಜಂಟಿಯಾಗಿ ಹೊಸ ತಂಡದ ನೇತೃತ್ವ ವಹಿಸಲಿದ್ದಾರೆ.

"ಸೂಪರ್ ಇಂಟೆಲಿಜೆನ್ಸ್ ಇದು ಮಾನವರು ಆವಿಷ್ಕರಿಸಿದ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನವಾಗಿದೆ ಮತ್ತು ಪ್ರಪಂಚದ ಅನೇಕ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಹಾಯ ಮಾಡುತ್ತದೆ. ಆದರೆ, ಸೂಪರ್ ಇಂಟೆಲಿಜೆನ್ಸ್‌ನ ಬೃಹತ್ ಶಕ್ತಿಯು ತುಂಬಾ ಅಪಾಯಕಾರಿಯಾಗಿದೆ ಮತ್ತು ಮಾನವೀಯತೆಯ ವಿನಾಶಕ್ಕೆ ಅಥವಾ ಮಾನವರ ಅಳಿವಿಗೆ ಕಾರಣವಾಗಬಹುದು" ಎಂದು ಓಪನ್ ಎಐ ಬುಧವಾರ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ.

ಕಂಪನಿಯ ಪ್ರಕಾರ, ಇಂಥದೊಂದು ಮಾಡೆಲ್ ಈ ದಶಕದ ಅಂತ್ಯದ ಮೊದಲು ಸಿದ್ಧವಾಗಬಹುದು. ಸೂಪರ್ ಇಂಟೆಲಿಜೆನ್ಸ್ ಜೋಡಣೆಯ ಸಮಸ್ಯೆಯನ್ನು ಪರಿಹರಿಸಲು ಮುಂದಿನ ನಾಲ್ಕು ವರ್ಷಗಳಲ್ಲಿ ತಾನು ಇಲ್ಲಿಯವರೆಗೆ ಪಡೆದುಕೊಂಡಿರುವ ಕಂಪ್ಯೂಟ್‌ನ 20 ಪ್ರತಿಶತವನ್ನು ಸಮರ್ಪಿಸುವುದಾಗಿ ಕಂಪನಿ ಹೇಳಿದೆ.

"ಇದು ನಂಬಲಾಗದಷ್ಟು ಮಹತ್ವಾಕಾಂಕ್ಷೆಯ ಗುರಿಯಾಗಿದೆ ಮತ್ತು ನಾವು ಯಶಸ್ವಿಯಾಗುವ ಭರವಸೆ ಇಲ್ಲ. ಕೇಂದ್ರೀಕೃತ, ಸಂಘಟಿತ ಪ್ರಯತ್ನದಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾವು ಆಶಾವಾದಿಗಳಾಗಿದ್ದೇವೆ. ಪ್ರಾಥಮಿಕ ಪ್ರಯೋಗಗಳಲ್ಲಿ ಭರವಸೆ ಹುಟ್ಟಿಸಿರುವ ಹಲವಾರು ವಿಚಾರಗಳಿವೆ. ಪ್ರಗತಿಗೆ ನಾವು ಹೆಚ್ಚು ಉಪಯುಕ್ತವಾದ ಮೆಟ್ರಿಕ್‌ಗಳನ್ನು ಹೊಂದಿದ್ದೇವೆ ಮತ್ತು ಈ ಅನೇಕ ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ನಾವು ಇಂದಿನ ಮಾದರಿಗಳನ್ನು ಬಳಸಬಹುದು" ಎಂದು ಸಂಶೋಧಕರು ಹೇಳಿದ್ದಾರೆ.

ಇದಲ್ಲದೇ, ಚಾಟ್‌ಜಿಪಿಟಿಯಂತಹ ಪ್ರಸ್ತುತ ಮಾಡೆಲ್​ಗಳ ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಓಪನ್‌ಎಐನಲ್ಲಿ ಅಸ್ತಿತ್ವದಲ್ಲಿರುವ ಕೆಲಸದ ಜೊತೆಗೆ ಹೊಸ ತಂಡದ ಕೆಲಸವು ಹೆಚ್ಚುವರಿಯಾಗಿದೆ ಎಂದು ಕಂಪನಿ ಹೇಳಿದೆ. ಜೊತೆಗೆ ಎಐನಿಂದ ದುರುಪಯೋಗ, ಆರ್ಥಿಕ ಅಡಚಣೆ, ತಪ್ಪು ಮಾಹಿತಿ, ಪಕ್ಷಪಾತ ಮತ್ತು ಇತರ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತಗ್ಗಿಸುವುದು ಕಂಪನಿಯ ಗುರಿಯಾಗಿದೆ.

ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್ (ASI) ಎನ್ನುವುದು ಸಾಫ್ಟ್‌ವೇರ್ ಆಧಾರಿತ ವ್ಯವಸ್ಥೆಯಾಗಿದ್ದು, ಇದು ಹಲವಾರು ವಿಚಾರಗಳಲ್ಲಿ ಮಾನವರ ಬೌದ್ಧಿಕ ಶಕ್ತಿಗಳನ್ನು ಮೀರಿಸಲಿದೆ. ASI ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ ಮತ್ತು ಇದೊಂದು ಕಾಲ್ಪನಿಕ ಸ್ಥಿತಿಯಾಗಿದೆ. ಎಎಸ್​ಐ ಸಾಮಾನ್ಯ ಕೃತಕ ಬುದ್ಧಿಮತ್ತೆ (AI) ಗಿಂತ ಭಿನ್ನವಾಗಿದೆ. ಇದು ಮಾನವ ಬೌದ್ಧಿಕ ಸಾಮರ್ಥ್ಯಗಳ ಸಾಫ್ಟ್‌ವೇರ್ ಆಧಾರಿತ ಸಿಮ್ಯುಲೇಶನ್ ಅನ್ನು ಒಳಗೊಂಡಿರುತ್ತದೆ. ಉದಾಹರಣೆಗೆ- ಮಾಹಿತಿಯ ಸ್ವಾಧೀನದ ಮೂಲಕ ಕಲಿಕೆ, ತಾರ್ಕಿಕತೆ ಮತ್ತು ಸ್ವಯಂ-ತಿದ್ದುಪಡಿಗಳು ಇದರ ವಿಶೇಷತೆಗಳಾಗಿರುತ್ತವೆ.

ಇದನ್ನೂ ಓದಿ : AI ತಂತ್ರಜ್ಞಾನ ಜಾಣವಿದ್ದರೂ ಬರೆಯಲು, ಎಣಿಸಲು ತಡವರಿಸುವುದೇಕೆ?

ABOUT THE AUTHOR

...view details