ಸ್ಯಾನ್ ಫ್ರಾನ್ಸಿಸ್ಕೊ: ಮೊಬೈಲ್ ತಂತ್ರಜ್ಞಾನದಲ್ಲಿನ ಮಹತ್ವದ ಆವಿಷ್ಕಾರವೊಂದರಲ್ಲಿ ಇನ್ನು ಮುಂದೆ ಉಪಗ್ರಹ ಸಂಪರ್ಕದ ಮೂಲಕ ಎಸ್ಸೆಮ್ಮೆಸ್ ಕಳುಹಿಸುವ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಮುಂಬರಲಿರುವ ಆಂಡ್ರಾಯ್ಡ್ 14 ಆವೃತ್ತಿಯ ಮೂಲಕ ಶೀಘ್ರದಲ್ಲೇ ಮೊಬೈಲ್ ಫೋನ್‌ಗಳಲ್ಲಿ ಉಪಗ್ರಹ ಸಂಪರ್ಕದ ಮೂಲಕ SMS ಕಳುಹಿಸಬಹುದು ಎಂದು ವರದಿಯಾಗಿದೆ. ಇದು ಮೊಬೈಲ್ ಸಂವಹನ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ.
ಪಿಕ್ಸೆಲ್ನ #TeamPixel Twitter ಖಾತೆಯ ಟ್ವೀಟ್ ಆಧರಿಸಿ, ಬಳಕೆದಾರರು ಶೀಘ್ರದಲ್ಲೇ Android 14 ಬಳಸಿ ಉಪಗ್ರಹ SMS ಸೌಲಭ್ಯವನ್ನು ಪಡೆಯುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. "Satellite SMS, Android 14" ಎಂದು #TeamPixel ಟ್ವೀಟ್ ಮಾಡಿದೆ.
ಸೆಲ್ಯುಲಾರ್ ಕವರೇಜ್ ಸೀಮಿತವಾಗಿರುವ ಅಥವಾ ಲಭ್ಯವಿಲ್ಲದ ಪ್ರದೇಶಗಳಲ್ಲಿಯೂ ಸಹ ಹೊಸ ಆ್ಯಂಡ್ರಾಯ್ಡ್ ಅಪ್ಡೇಟ್ ಬಂದ ನಂತರ ಬಳಕೆದಾರರು ತಮ್ಮ ಮೊಬೈಲ್ ಮೂಲಕ ಎಸ್ಸೆಮ್ಮೆಸ್ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಲಿದೆ. ಇದಲ್ಲದೆ, ಪಿಕ್ಸೆಲ್ ಮತ್ತು ಗ್ಯಾಲಕ್ಸಿ ಫೋನ್‌ಗಳು ಸ್ಯಾಟಲೈಟ್ ಮೂಲಕ ಎಸ್ಸೆಮ್ಮೆಸ್ ಅನ್ನು ಬೆಂಬಲಿಸುವ ಹಾರ್ಡ್‌ವೇರ್ ಹೊಂದಿರುವ ಮೊದಲ ಆಂಡ್ರಾಯ್ಡ್ ಫೋನ್‌ಗಳಲ್ಲಿ ಒಂದಾಗಿವೆ ಎಂದು ಟ್ವೀಟ್ ಉಲ್ಲೇಖಿಸಿದೆ.
"ಉಪಗ್ರಹ ಎಸ್ಸೆಮ್ಮೆಸ್ ಸೌಲಭ್ಯವನ್ನು ಆ್ಯಂಡ್ರಾಯ್ಡ್ಗೆ ಸೇರಿಸಲಾಗುತ್ತದೆ ಮತ್ತು ಅದಕ್ಕೆ ಸೂಕ್ತವಾದ ಹಾರ್ಡ್‌ವೇರ್ ಅಗತ್ಯವಿರುತ್ತದೆ. ಹಾರ್ಡ್‌ವೇರ್ ಅಳವಡಿಸುವುದು ತಯಾರಕರಿಗೆ ಬಿಟ್ಟ ವಿಷಯ. ಪಿಕ್ಸೆಲ್ ಮತ್ತು ಗ್ಯಾಲಕ್ಸಿ ಈ ವೈಶಿಷ್ಟ್ಯ ಹೊಂದಿರುವ ಮೊದಲ ಫೋನ್ಗಳಾಗಲಿವೆ" ಎಂದು ಪಿಕ್ಸೆಲ್ #TeamPixel ಹೇಳಿದೆ.