ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಭಾರತದ ಸ್ಮಾರ್ಟ್ಫೋನ್ಗಳು ಸೇರಿದಂತೆ ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ತರಲಿದೆ ಮತ್ತು ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುವಲ್ಲಿ, ಕ್ಯಾಮೆರಾ ಗುಣಮಟ್ಟ ಸುಧಾರಿಸುವಲ್ಲಿ ಮತ್ತು ಭವಿಷ್ಯದ ಸಾಧನಗಳಲ್ಲಿ ಧ್ವನಿ ಸಹಾಯಕ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಉದ್ಯಮದ ತಜ್ಞರು ಬುಧವಾರ ಹೇಳಿದ್ದಾರೆ.
ಭಾರತದ ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿ ಹಾನರ್ ಟೆಕ್ನ ಸಿಇಒ ಮಾಧವ್ ಶೇಠ್ ಈ ಬಗ್ಗೆ ಮಾತನಾಡಿ, ಸ್ಮಾರ್ಟ್ಫೋನ್ ಉದ್ಯಮವು ವೇಗವಾಗಿ ವಿಕಸನಗೊಳ್ಳುತ್ತಿದೆ ಮತ್ತು ಈ ರೂಪಾಂತರದಲ್ಲಿ ಎಐ ಮುಂಚೂಣಿಯಲ್ಲಿದೆ. ಎಐನ ಕಾರ್ಯತಂತ್ರದ ಬಳಕೆಯು ಭವಿಷ್ಯದ ಸ್ಮಾರ್ಟ್ಫೋನ್ಗಳನ್ನು ಹೆಚ್ಚು ದೃಢವಾದ, ಬಹುಮುಖ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ" ಎಂದು ಅವರು ಐಎಎನ್ಎಸ್ಗೆ ತಿಳಿಸಿದರು.
ಹಾನರ್ ತನ್ನ ಹೊಸ ಹಾನರ್ 90 ನ ಕ್ಯಾಮೆರಾ ವ್ಯವಸ್ಥೆಯಲ್ಲಿ ಎಐ ಅನ್ನು ಸಂಯೋಜಿಸಿದೆ. ಇದು ವ್ಲಾಗರ್ ಗಳ ಅಗತ್ಯಗಳನ್ನು ನಿರ್ದಿಷ್ಟವಾಗಿ ಪೂರೈಸುತ್ತದೆ. "ಇಂದಿನ ಡಿಜಿಟಲ್ ಯುಗದಲ್ಲಿ ವ್ಲಾಗಿಂಗ್ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದ್ದಂತೆ, ಹೆಚ್ಚಿನ ಜನರು ವೀಡಿಯೊ ಕಂಟೆಂಟ್ಗಳನ್ನು ರಚಿಸುತ್ತಿದ್ದಾರೆ ಮತ್ತು ಶೇರ್ ಮಾಡುತ್ತಿದ್ದಾರೆ. ಹಾನರ್ 90 ನ ಎಐ ವ್ಲಾಗ್ ಮಾಸ್ಟರ್ನೊಂದಿಗೆ ವೀಡಿಯೊ ಸೆಟ್ಟಿಂಗ್ಗಳನ್ನು ಸರಳೀಕರಿಸಲಾಗಿದೆ. ಏಕೆಂದರೆ ಇದು ಚಿತ್ರೀಕರಣದ ದೃಶ್ಯಗಳನ್ನು ಗುರುತಿಸುತ್ತದೆ ಮತ್ತು ಸೂಕ್ತ ವಿಧಾನಗಳನ್ನು ಶಿಫಾರಸು ಮಾಡುತ್ತದೆ" ಎಂದು ಶೇಠ್ ಹೇಳಿದರು.