ಕರ್ನಾಟಕ

karnataka

ETV Bharat / science-and-technology

ಸಾಂಕ್ರಾಮಿಕ ರೋಗಗಳ ವಿಕಸನ ಟ್ರ್ಯಾಕ್ ಮಾಡಲು AI ಆಧಾರಿತ ಹೊಸ ಯಂತ್ರ ಕಲಿಕಾ ವ್ಯವಸ್ಥೆ ಅಭಿವೃದ್ಧಿ

ಸಾಂಕ್ರಾಮಿಕ ರೋಗಗಳ ವಿವರವಾದ ವಿಕಸನವನ್ನು ಟ್ರ್ಯಾಕ್ ಮಾಡುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಹೊಸ ಯಂತ್ರ ಕಲಿಕೆ ವ್ಯವಸ್ಥೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

By

Published : Jul 22, 2023, 9:28 PM IST

scientists-develop-ai-based-tracking-and-early-warning-system-for-viral-pandemics
ಸಾಂಕ್ರಾಮಿಕ ರೋಗಗಳ ವಿಕಸನ ಟ್ರ್ಯಾಕ್ ಮಾಡಲು AI ಆಧಾರಿತ ಹೊಸ ಯಂತ್ರ ಕಲಿಕೆ ವ್ಯವಸ್ಥೆ ಅಭಿವೃದ್ಧಿ

ನ್ಯೂಯಾರ್ಕ್ (ಅಮೆರಿಕ): ವಿಜ್ಞಾನಿಗಳು ಹೊಸ ಯಂತ್ರ ಕಲಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಒಂದು ವಿಧದ ಕೃತಕ ಬುದ್ಧಿಮತ್ತೆ (Artificial Intelligence - AI) ಅಪ್ಲಿಕೇಶನ್ ಆಗಿದೆ. ಈ ವ್ಯವಸ್ಥೆ ಮೂಲಕ ಸಾಂಕ್ರಾಮಿಕ ವೈರಸ್‌ಗಳ ವಿವರವಾದ ವಿಕಸನವನ್ನು ಟ್ರ್ಯಾಕ್ ಮಾಡಬಹುದು. ಜೊತೆಗೆ ಪ್ರಮುಖ ಹೊಸ ಗುಣಲಕ್ಷಣಗಳೊಂದಿಗೆ ವೈರಲ್ ರೂಪಾಂತರಗಳ ಹೊರಹೊಮ್ಮುವಿಕೆ ಊಹಿಸಬಹುದಾಗಿದೆ.

ಸೆಲ್ ಪ್ಯಾಟರ್ನ್ಸ್‌ನಲ್ಲಿನ ಕಾಗದದಲ್ಲಿ ವಿಜ್ಞಾನಿಗಳು, ರೆಕಾರ್ಡ್ ಮಾಡಲಾದ ಸಾರ್ಸ್​ ಕೋವ್​ 2 (SARS-CoV-2) ರೂಪಾಂತರಗಳು ಮತ್ತು ಕೋವಿಡ್ ಮರಣ ದರಗಳ ಡೇಟಾ ಬಳಸಿಕೊಂಡು ಈ ವ್ಯವಸ್ಥೆಯನ್ನು ಪ್ರದರ್ಶಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಹೇಳಿಕೆಗಿಂತ ಮುಂಚಿತವಾಗಿ ಹೊಸ ಸಾರ್ಸ್​ ಕೋವ್​ 2 ರೂಪಾಂತರಗಳ (VOCs) ಹೊರಹೊಮ್ಮುವಿಕೆಯನ್ನು ಊಹಿಸಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:ಮಾನವರಿಗಿಂತ ಬುದ್ಧಿವಂತ 'Super Intelligence AI': ಇದೆಷ್ಟು ಅಪಾಯಕಾರಿ ಗೊತ್ತಾ?

ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಪತ್ತೆಹಚ್ಚಲು ನೈಜ ಸಮಯದಲ್ಲಿ ಅಂತಹ ವ್ಯವಸ್ಥೆ ಬಳಸುವ ಸಾಧ್ಯತೆಯನ್ನು ಸಂಶೋಧನೆಗಳು ಸೂಚಿಸಿವೆ. ಸಾಂಕ್ರಾಮಿಕ ವೈರಸ್ ವಿಕಸನದ ನಿಯಮಗಳಿವೆ. ಅದನ್ನು ನಾವು ಅರ್ಥಮಾಡಿಕೊಳ್ಳಲಾಗಿಲ್ಲ. ಆದರೆ, ಅವುಗಳನ್ನು ಕಂಡುಹಿಡಿಯಬಹುದು. ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಮೂಲಕ ಈ ಯಂತ್ರ ಕಲಿಕೆ ವಿಧಾನದಿಂದ ಕಾರ್ಯಸಾಧ್ಯವಾದ ಅರ್ಥದಲ್ಲಿ ಬಳಸಬಹುದಾಗಿದೆ ಎಂದು ಅಮೆರಿಕದ ಸ್ಕ್ರಿಪ್ಸ್ ರಿಸರ್ಚ್ ಟ್ರಾನ್ಸ್‌ಲೇಶನಲ್ ಇನ್‌ಸ್ಟಿಟ್ಯೂಟ್‌ನ ಮಾಲಿಕ್ಯುಲರ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ವಿಲಿಯಂ ಬಾಲ್ಚ್ ತಿಳಿಸಿದ್ದಾರೆ.

ಇದನ್ನೂ ಓದಿ:AI Effect: 8 ಲಕ್ಷ ಉದ್ಯೋಗ ಕಸಿಯಲಿದೆ ಕೃತಕ ಬುದ್ಧಿಮತ್ತೆ: ಹಾಂ​ಕಾಂಗ್​ ಉದ್ಯೋಗಿಗಳಲ್ಲಿ ಆತಂಕ!

ಈ ಕುರಿತ ಅಧ್ಯಯನಕ್ಕಾಗಿ ತಂಡವು ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತಮ್ಮ ವಿಧಾನವನ್ನು ಅನ್ವಯಿಸಿತು. ಸಾಂಕ್ರಾಮಿಕ ರೋಗವನ್ನು ವ್ಯಾಪಿಸಿರುವ ಮೂರು ಡೇಟಾ ಸೆಟ್‌ಗಳಿಗೆ ಸಂಬಂಧಿಸಿದ ಗಾಸಿಯನ್ ಪ್ರಕ್ರಿಯೆ ಆಧಾರಿತ ಪ್ರಾದೇಶಿಕ ಕೋವೇರಿಯನ್ಸ್ ಎಂಬ ತಂತ್ರವನ್ನು ಬಳಸಿಕೊಂಡು ಈ ಯಂತ್ರ ಕಲಿಕೆ ಸಾಫ್ಟ್‌ವೇರ್​ಅನ್ನು ಅಭಿವೃದ್ಧಿಪಡಿಸಲಾಗಿದೆ. ವಿಶ್ವಾದ್ಯಂತ ಸೋಂಕಿತ ಜನರಲ್ಲಿ ಕಂಡುಬರುವ ಸಾರ್ಸ್​ ಕೋವ್​ 2 ರೂಪಾಂತರಗಳ ಅನುವಂಶಿಕ ಅನುಕ್ರಮಗಳು ಹಾಗೂ ಆ ರೂಪಾಂತರಗಳ ಆವರ್ತನಗಳು ಮತ್ತು ಕೋವಿಡ್​ನಿಂದ ಉಂಟಾದ ಮರಣ ಪ್ರಮಾಣದ ಮಾಹಿತಿ ಬಳಸಿಕೊಂಡು ಇದನ್ನು ಸಿದ್ಧಪಡಿಲಾಗಿದೆ.

ನಾವು ಪ್ರಮುಖ ಜೀನ್ ರೂಪಾಂತರಗಳು ಕಾಣಿಸಿಕೊಳ್ಳುವುದನ್ನು ಮತ್ತು ಹೆಚ್ಚು ಪ್ರಚಲಿತವಾಗುತ್ತಿರುವುದನ್ನು ನೋಡಬಹುದು. ಸಾರ್ಸ್​ ಕೋವ್​ 2 ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅದರ ವೈರಸ್ ಹರಡುವಿಕೆ ಮತ್ತು ಮರಣ ದರಗಳಲ್ಲಿನ ಗಮನಾರ್ಹ ಬದಲಾವಣೆಗಳಿಗೆ ಸಂಬಂಧಿಸಿದ ಜೀನ್ ರೂಪಾಂತರಗಳಿಗೆ ಮುಂಚಿನ ಎಚ್ಚರಿಕೆ ಇದನ್ನು ಬಳಸಬಹುದು. ಇದರ ಉದ್ದೇಶ ಎಂದರೆ ಕೆಲವು ಪ್ರಮುಖ ರೂಪಾಂತರಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಆದರೆ, ನಾವು 'ವೇರಿಯಂಟ್ ಡಾರ್ಕ್ ಮ್ಯಾಟರ್' ಎಂದು ಕರೆಯುವ ಹತ್ತಾರು ಸಾವಿರ ಇತರ ಗುರುತಿಸದ ರೂಪಾಂತರಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ವೇಗವಾಗಿ ವಿಸ್ತರಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಪಾಯಕಾರಿ: ಆತಂಕ ವ್ಯಕ್ತಪಡಿಸಿದ ಜೇಮ್ಸ್ ಕ್ಯಾಮರೂನ್

ABOUT THE AUTHOR

...view details