ನವದೆಹಲಿ: ಸ್ಯಾಮ್ಸಂಗ್ನ ಪ್ರೀಮಿಯಂ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಸ್ 23 ಎಫ್ಇ ಇದೇ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಆರಂಭಿಕ ಬೆಲೆ ಸುಮಾರು 50,000 ರೂಪಾಯಿ ಆಗಿರಲಿದೆ. ಗ್ಯಾಲಕ್ಸಿ ಎಸ್ 23 ಎಫ್ಇ ಸ್ಯಾಮ್ಸಂಗ್ನ ಪ್ರಮುಖ ನೈಟೋಗ್ರಫಿ ಅಥವಾ ನೈಟ್ ಮೋಡ್ ವೈಶಿಷ್ಟ್ಯವನ್ನು ಹೊಂದಿರಲಿದೆ. ಇದರಿಂದ ಕತ್ತಲೆಯಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆ ಹಿಡಿಯಬಹುದಾಗಿದೆ.
ಹೆಚ್ಚಿನ ಬಾಳಿಕೆಗಾಗಿ ಈ ಸ್ಮಾರ್ಟ್ಫೋನ್ನಲ್ಲಿ ಐಪಿ 68 ಪ್ರಮಾಣೀಕರಣವಿದ್ದು, ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಉತ್ತಮ ಗೇಮಿಂಗ್ ಅನುಭವಕ್ಕಾಗಿ ಸ್ಯಾಮ್ಸಂಗ್ನ ಪ್ರಮುಖ ಪ್ರೊಸೆಸರ್ ಇದರಲ್ಲಿದೆ ಎಂದು ಮೂಲಗಳು ಸೋಮವಾರ ಐಎಎನ್ಎಸ್ಗೆ ತಿಳಿಸಿವೆ. ಗ್ಯಾಲಕ್ಸಿ ಎಸ್ 23 ಎಫ್ಇ ಅಮೆಜಾನ್, ಸ್ಯಾಮ್ಸಂಗ್ ಡಾಟ್ ಕಾಂ ಮತ್ತು ಚಿಲ್ಲರೆ ಅಂಗಡಿಗಳಲ್ಲಿ 50,000 ರೂ.ಗಳ ನಿವ್ವಳ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಹಬ್ಬದ ಋತುವಿನಲ್ಲಿ ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸಲು ಬಯಸುವ ಗ್ರಾಹಕರನ್ನು ಆಕರ್ಷಿಸಲು ಸ್ಯಾಮ್ಸಂಗ್ ತನ್ನ ಹೊಸ ಪ್ರೀಮಿಯಂ ಫೋನ್ ಅನ್ನು ಬಿಡುಗಡೆ ಮಾಡಿದೆ.
ಹೊಸ ಫೋನ್ಗೆ ಅತ್ಯಂತ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿ ಮಾಡಿರುವುದರಿಂದ ಹಬ್ಬದ ಮಾರಾಟದ ಸಮಯದಲ್ಲಿ ಪ್ರೀಮಿಯಂ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂಬುದು ಕಂಪನಿಯ ನಂಬುಗೆಯಾಗಿದೆ. ಫ್ಯಾನ್ ಎಡಿಷನ್ ಎಂದು ಕರೆಯಲಾಗುವ ಸ್ಯಾಮ್ಸಂಗ್ ಎಫ್ಇ ಶ್ರೇಣಿಯನ್ನು 2020 ರಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಗ್ಯಾಲಕ್ಸಿ ಎಫ್ಇ ಸರಣಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗಿದೆ ಮತ್ತು ಸೂಕ್ತವಾದ ಬೆಲೆ ನಿಗದಿ ಮಾಡಿದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗಬಹುದು ಎನ್ನುತ್ತಾರೆ ವಿಶ್ಲೇಷಕರು.