ಸಿಯೋಲ್ :ಫೋಲ್ಡಬಲ್ ಅಥವಾ ಮಡಚಬಹುದಾದ ಫೋನ್ಗಳ ವಿಷಯದಲ್ಲಿ ಸ್ಯಾಮ್‌ಸಂಗ್ ಮತ್ತೊಂದು ಹೊಸ ಮಟ್ಟದ ಅನುಭವ ನೀಡಲು ಸಜ್ಜಾಗಿದೆ. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಫೋಲ್ಡಬಲ್ ಸಾಧನಗಳ ಐದನೇ ತಲೆಮಾರಿನ Galaxy Z Flip5 ಮತ್ತು Galaxy Z Fold5 ಅನ್ನು ಬುಧವಾರ ಅನಾವರಣಗೊಳಿಸಿದೆ. ಇವು ಹಿಂದಿನ ಫೋನ್ಗಳಿಗಿಂತ ತೆಳ್ಳಗೆ, ಹಗುರವಾಗಿ ಮತ್ತು ವೇಗವಾಗಿವೆ.
ಗ್ಯಾಲಕ್ಸಿ Z ಫೋಲ್ಡ್5 ಐಸಿ ಬ್ಲೂ, ಫ್ಯಾಂಟಮ್ ಬ್ಲಾಕ್ ಮತ್ತು ಕ್ರೀಮ್ 36 ಬಣ್ಣಗಳಲ್ಲಿ ಲಭ್ಯವಿದ್ದರೆ, ಗ್ಯಾಲಕ್ಸಿ Z ಫ್ಲಿಪ್5 ಮಿಂಟ್, ಗ್ರ್ಯಾಫೈಟ್, ಕ್ರೀಮ್ ಮತ್ತು ಲ್ಯಾವೆಂಡರ್ 34 ಫಿನಿಶ್‌ಗಳಲ್ಲಿ ಲಭ್ಯವಾಗಲಿದೆ. ಫೋಲ್ಡ್5 8GB+512GB ಮತ್ತು 8GB+256GB ಆಂತರಿಕ ಸ್ಟೋರೇಜ್ ಹಾಗೂ 3,700mAh ಬ್ಯಾಟರಿ ಹೊಂದಿವೆ. ಇದು ಆಂಡ್ರಾಯ್ಡ್ 13 (One UI 5.1.1) ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ಸಾಧನವು 10MP ಸೆಲ್ಫಿ ಕ್ಯಾಮೆರಾ, ಹಿಂಭಾಗದ ಡ್ಯುಯಲ್ ಕ್ಯಾಮೆರಾ (12MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 12MP ವೈಡ್-ಆಂಗಲ್ ಕ್ಯಾಮೆರಾ) ಹೊಂದಿದೆ. ಹೊಸ ಫ್ಲೆಕ್ಸ್ ಹಿಂಜ್ ಬಳಕೆದಾರರಿಗೆ ಫೋನ್ನ ಫೋಲ್ಡಬಲ್ ವಿನ್ಯಾಸದ ಅತ್ಯುತ್ತಮ ಅನುಭವ ನೀಡುತ್ತದೆ.
ಎರಡೂ ಸಾಧನಗಳಲ್ಲಿ ಮುಖ್ಯ ಸ್ಕ್ರೀನ್ ಆಘಾತ ಪ್ರಸರಣ ಪದರವನ್ನು (shock dispersion layer) ಹೊಂದಿದೆ ಮತ್ತು ಹೆಚ್ಚು ದೃಢವಾದ ಲುಕ್ಗಾಗಿ ಮರು ವಿನ್ಯಾಸಗೊಳಿಸಲಾದ ಹಿಂಭಾಗವನ್ನು ಹೊಂದಿದೆ. IPX8 3 ಬೆಂಬಲದೊಂದಿಗೆ, ಆರ್ಮರ್ ಅಲ್ಯೂಮಿನಿಯಂ ಫ್ರೇಮ್‌ಗಳು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಫ್ಲೆಕ್ಸ್ ವಿಂಡೋ ಮತ್ತು ಬ್ಯಾಕ್ ಕವರ್ಗಳನ್ನು ಎರಡಕ್ಕೂ ಅನ್ವಯಿಸಲಾಗಿದೆ.
ಇನ್ನು ವೇರೆಬಲ್ ಡಿವೈಸ್ ಅಥವಾ ಧರಿಸಬಹುದಾದ ಸಾಧನಗಳ ಬಗ್ಗೆ ನೋಡುವುದಾದರೆ- Galaxy Watch6 ಸರಣಿಯ ಸ್ಮಾರ್ಟ್ವಾಚ್ಗಳ ಸ್ಕ್ರೀನ್ ಅಳತೆಯನ್ನು ಶೇಕಡಾ 20 ರಷ್ಟು ದೊಡ್ಡದು ಮಾಡಲಾಗಿದೆ. ಇದರಿಂದ ಸ್ಕ್ರೀನ್ ಮೇಲೆ ಹೆಚ್ಚಿನ ಟೆಕ್ಸ್ಟ್ ನೋಡಬಹುದು ಮತ್ತು ದೊಡ್ಡ ಕೀಬೋರ್ಡ್ ಬಳಸಬಹುದು. ಇದು 2,000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ ಮತ್ತು ಯಾವಾಗಲೂ ಆನ್ ಡಿಸ್ಪ್ಲೇ ಬ್ರೈಟ್‌ನೆಸ್ ಹೊಂದಾಣಿಕೆ ವೈಶಿಷ್ಟ್ಯವನ್ನು ಹೊಂದಿದೆ. ಇದರಿಂದ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸುಲಭವಾಗಿ ಸ್ಕ್ರೀನ್ ಮೇಲಿರುವುದನ್ನು ನೋಡಬಹುದು.
ಗ್ಯಾಲಕ್ಸಿ ವಾಚ್6 ಮತ್ತು ವಾಚ್6 ಕ್ಲಾಸಿಕ್‌ಗಳು ಕ್ರಮವಾಗಿ ಶೇಕಡಾ 30 ರಷ್ಟು ತೆಳುವಾದ ಬೆಜೆಲ್ ಮತ್ತು ಶೇಕಡಾ 15 ರಷ್ಟು ತೆಳುವಾದ ತಿರುಗುವ ಬೆಜೆಲ್ ಅನ್ನು ಹೊಂದಿವೆ. ಹೊಸ ಗ್ಯಾಲಕ್ಸಿ ವಾಚ್6 ಸ್ಲೀಪ್ ಸ್ಕೋರ್ ಅಂಶಗಳ ಆಳವಾದ ವಿಶ್ಲೇಷಣೆಯನ್ನು ನೀಡುತ್ತದೆ (ಒಟ್ಟು ನಿದ್ರೆಯ ಸಮಯ, ನಿದ್ರೆಯ ಚಕ್ರ, ಎಚ್ಚರ ಸಮಯ, ಜೊತೆಗೆ ದೈಹಿಕ ಮತ್ತು ಮಾನಸಿಕ ಚೇತರಿಕೆ). ಹೊಸ ಪರ್ಸನಲೈಸ್ಡ್ ಹಾರ್ಟ್ ರೇಟ್ ಜೋನ್, ರಕ್ತದೊತ್ತಡ ಮತ್ತು ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮಾನಿಟರಿಂಗ್, ಹೊಸ ಅನಿಯಮಿತ ಹೃದಯದ ಲಯ ಅಧಿಸೂಚನೆ ವೈಶಿಷ್ಟ್ಯ, ಚರ್ಮದ ತಾಪಮಾನ, ಋತುಚಕ್ರದ ಟ್ರ್ಯಾಕಿಂಗ್ ಹೀಗೆ ಹಲವಾರು ಟ್ರ್ಯಾಕಿಂಗ್ಗಳನ್ನು ಇವು ಒಳಗೊಂಡಿವೆ.
ಇದನ್ನೂ ಓದಿ : Google Update:ಸ್ವಯಂಚಾಲಿತವಾಗಿ ಲೈನ್ ನಂಬರ್ ಸೇರಿಸಲಿದೆ Google Docs