ನವದೆಹಲಿ:ಥೇಟ್ ಮಾನವನಂತೆಯೇ ವರ್ತಿಸುವ ಹಾಗೂ ಕೆಲಸ ಮಾಡುವ ವಿಶಿಷ್ಟ ರೋಬೋಟ್ ಒಂದನ್ನು ಟೆಸ್ಲಾ ತಯಾರಿಸಿದೆ. ಟೆಸ್ಲಾದ ಮಾನವನ ತದ್ರೂಪಿ ಹ್ಯೂಮನಾಯ್ಡ್ ರೋಬೋಟ್ 'ಆಪ್ಟಿಮಸ್' ಅನ್ನು ಎಲೋನ್ ಮಸ್ಕ್ ಸೋಮವಾರ ಪ್ರದರ್ಶಿಸಿದರು. ವಿಭಿನ್ನ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದ ಈ ರೋಬೋಟ್ ನೆರೆದ ಜನರನ್ನು ನಮಸ್ತೆ ಎಂದು ಸ್ವಾಗತಿಸಿತು.
ಅಕ್ಟೋಬರ್ನಲ್ಲಿ ನಡೆದ 'ಟೆಸ್ಲಾ ಎಐ ಡೇ' 2022 ರ ಸಂದರ್ಭದಲ್ಲಿ ಮೊದಲ ಬಾರಿಗೆ ಆಪ್ಟಿಮಸ್ ಅನ್ನು ಜಗತ್ತಿಗೆ ತೋರಿಸಲಾಗಿತ್ತು. ಆಗ ಇದರ ವೀಡಿಯೊ ಒಂದನ್ನು ಎಲೋನ್ ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಆಪ್ಟಿಮಸ್ ಸರಳವಾದ ಕೆಲಸಗಳನ್ನು ಮಾಡುವುದು ವೀಡಿಯೊದಲ್ಲಿ ಕಂಡು ಬಂದಿತ್ತು. ಆಪ್ಟಿಮಸ್ ಈಗ ತನ್ನ ತೋಳುಗಳು ಮತ್ತು ಕಾಲುಗಳನ್ನು ಸ್ವಯಂ ಆಗಿ ಚಲಿಸುವ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ದೃಷ್ಟಿ ಮತ್ತು ಜೋಡಣೆಯ ಸ್ಥಾನ ಎನ್ಕೋಡರ್ಗಳನ್ನು (joint position encoders) ಮಾತ್ರ ಬಳಸಿಕೊಂಡು, ರೋಬೋಟ್ ಭೂಮಿಯ ಮೇಲೆ ತನ್ನ ಕಾಲುಗಳು ಎಲ್ಲಿವೆ ಎಂಬುದನ್ನು ನಿಖರವಾಗಿ ಕಂಡುಹಿಡಿಯುತ್ತದೆ. ಇದು ಬಣ್ಣದ-ಬ್ಲಾಕ್ ಗಳನ್ನು ವಿಂಗಡಿಸುವುದು ಮತ್ತು ಅವುಗಳನ್ನು ಬೆರೆಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಗಳನ್ನು ಸರಾಗವಾಗಿ ಕಲಿಯುತ್ತದೆ ಮತ್ತು ಅದರ ನರ ಜಾಲವು ಸಂಪೂರ್ಣವಾಗಿ ದೃಷ್ಟಿಯನ್ನು ಬಳಸಿಕೊಂಡು ಚಲಿಸುತ್ತದೆ.