ನವದೆಹಲಿ :ಯಾವುದೋ ಆ್ಯಪ್ನ ನಿಜವಾದ ಆವೃತ್ತಿಯಂತೆ ಕಾಣುವ 'ಫ್ಲುಹಾರ್ಸ್' ಎಂದು ಕರೆಯಲ್ಪಡುವ ಹೊಸ ಆಂಡ್ರಾಯ್ಡ್ ಮಾಲ್ವೇರ್ವೊಂದು ಈಗಾಗಲೇ ಪೂರ್ವ ಏಷ್ಯಾದ ಸುಮಾರು 1 ಲಕ್ಷ ಫೋನ್ಗಳಲ್ಲಿ ಇನ್‌ಸ್ಟಾಲ್ ಆಗಿದೆ ಎಂದು ತಿಳಿದು ಬಂದಿದೆ. ಚೆಕ್ ಪಾಯಿಂಟ್ ಸಂಸ್ಥೆಯ ಸಂಶೋಧನೆಯ ಪ್ರಕಾರ, ಈ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಪಾಸ್ ವರ್ಡ್ಗಳು ಮತ್ತು ಎರಡು ಹಂತದ ದೃಢೀಕರಣ (2- FA) ಕೋಡ್‌ಗಳನ್ನು ಒಳಗೊಂಡಂತೆ ಸೂಕ್ಷ್ಮ ಮಾಹಿತಿಯನ್ನು ಕಳವು ಮಾಡುವಂತೆ ತಯಾರಿಸಲಾಗಿದೆ.
ಫ್ಲುಹಾರ್ಸ್ ಮಾಲ್‌ವೇರ್ ಪೂರ್ವ ಏಷ್ಯಾದಲ್ಲಿ ಬಹು ವಲಯಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಸಾಮಾನ್ಯವಾಗಿ ಇಮೇಲ್ ಮೂಲಕ ಹರಡುತ್ತದೆ. ಕೆಲವು ಸಂದರ್ಭಗಳಲ್ಲಿ, ಫಿಶಿಂಗ್ ಇಮೇಲ್ ದಾಳಿಯ ಆರಂಭಿಕ ಹಂತಗಳಲ್ಲಿ ಸರ್ಕಾರಿ ಅಧಿಕಾರಿಗಳಂಥ ಉನ್ನತ ಪ್ರೊಫೈಲ್ನ ಜನರನ್ನು ಗುರಿಯಾಗಿಸಲಾಗಿತ್ತು. ಫ್ಲುಹಾರ್ಸ್ ನ ಅತ್ಯಂತ ಆತಂಕಕಾರಿ ಅಂಶವೆಂದರೆ ಇದು ದೀರ್ಘಕಾಲದವರೆಗೆ ಪತ್ತೆಯೇ ಆಗುವುದಿಲ್ಲ. ಹೀಗಾಗಿ ಇದೊಂದು ಪತ್ತೆ ಮಾಡಲಾಗದ ನಿರಂತರ ಅಪಾಯವಾಗಿದೆ.
ವರದಿಯ ಪ್ರಕಾರ, ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಿಗೆ ದುರುದ್ದೇಶಪೂರಿತ ಇಮೇಲ್ ಗಳನ್ನು ಕಳುಹಿಸುವ ಮೂಲಕ ಫ್ಲುಹಾರ್ಸ್ ದಾಳಿಗಳನ್ನು ಆರಂಭಿಸಲಾಗುತ್ತದೆ. ಯಾವುದೋ ಪಾವತಿ ವಿಷಯದಲ್ಲಿ ಸಮಸ್ಯೆಯಾಗಿದ್ದು, ಅದನ್ನು ಬೇಗನೇ ಪರಿಹರಿಸಬೇಕೆಂದು ಈ ಮಾಲ್‌ವೇರ್ ಒತ್ತಾಯಿಸಲಾರಂಭಿಸುತ್ತದೆ. ಬಳಕೆದಾರ ಇದಕ್ಕೆ ಸ್ಪಂದಿಸಿದರೆ ಆ ಲಿಂಕ್ ಇ ಮೇಲ್‌ನಲ್ಲಿ ಒಳಗೊಂಡಿರುವ ಹೈಪರ್ ಲಿಂಕ್ ಮೂಲಕ ಫಿಶಿಂಗ್ ವೆಬ್‌ಸೈಟ್‌ಗೆ ಕನೆಕ್ಟ್ ಆಗುತ್ತದೆ. ಅಲ್ಲಿಗೆ ತಲುಪಿದ ನಂತರ, ನಕಲಿ ಅಪ್ಲಿಕೇಶನ್‌ನ ಫೋನಿ ಎಪಿಕೆ (ಆಂಡ್ರಾಯ್ಡ್ ಪ್ಯಾಕೇಜ್ ಫೈಲ್) ಅನ್ನು ಡೌನ್‌ಲೋಡ್ ಬಳಕೆದಾರರಿಗೆ ಮಾಡುವಂತೆ ಮನವಿ ಮಾಡುತ್ತದೆ.