ಮೆಲ್ಬೋರ್ನ್, ಆಸ್ಟ್ರೇಲಿಯಾ :ಬಾಹ್ಯಾಕಾಶದ ಕೆಲವು ರಹಸ್ಯಗಳನ್ನು ಬಿಚ್ಚಿಡಲು ಹಿಂದಿನ ಕ್ರಿಸ್‌ಮಸ್ ದಿನದಂದು ಉಡಾವಣೆಯಾದ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಅನ್ನು ಖಗೋಳ ವಿಜ್ಞಾನಿಗಳು ಕುತೂಹಲದಿಂದ ಗಮನಿಸುತ್ತಿದ್ದಾರೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಎರಡನೇ ಲ್ಯಾಂಗ್ರೆಜ್ ಪಾಯಿಂಟ್ ಅನ್ನು ಇದು ತಲುಪಿದ್ದು, ಹೊಸ ಅವಿಷ್ಕಾರಗಳನ್ನು ಮಾಡಲಿದೆ.
ಏನಿದು ಲ್ಯಾಂಗ್ರೇಜ್ ಪಾಯಿಂಟ್?:ಸೂರ್ಯನಿಗೂ ಒಂದು ರೀತಿಯ ಗುರುತ್ವಾಕರ್ಷಣ ಬಲವಿದೆ. ಭೂಮಿಗೂ ಒಂದು ರೀತಿಯ ಗುರುತ್ವಾಕರ್ಷಣ ಬಲವಿದೆ. ಭೂಮಿಯಿಂದ ಯಾವುದಾದರೂ ಒಂದು ವಸ್ತು ಮೇಲಕ್ಕೆ ಹೊರಟಂತೆ ಒಂದು ಹಂತದ ನಂತರ ಗುರುತ್ವಾಕರ್ಷಣ ಶಕ್ತಿ ಕ್ಷೀಣಿಸುತ್ತದೆ.
ನಂತರ ಅಲ್ಲಿಂದ ಸೂರ್ಯನ ಗುರುತ್ವಾಕರ್ಷಣ ಶಕ್ತಿಗೆ ಅದು ಸಿಲುಕಿಕೊಳ್ಳುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಗುರುತ್ವಾಕರ್ಷಣ ಶಕ್ತಿ ಸಮನಾಗಿರುವ ಅಥವಾ ಸೂರ್ಯ ಅಥವಾ ಭೂಮಿಯ ನಡುವೆ ಗುರುತ್ವಾಕರ್ಷಣ ಶಕ್ತಿ ಶೂನ್ಯವಾಗಿರುವ ಪ್ರದೇಶವೊಂದು ಭೂಮಿ ಮತ್ತು ಸೂರ್ಯನ ನಡುವೆ ಇರುತ್ತದೆ.
ಅಂತಹ ಸ್ಥಳವನ್ನೇ ಲ್ಯಾಂಗ್ರೇಜ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈಗ ತಜ್ಞರು ಹೇಳುವಂತೆ ಈ ಲ್ಯಾಂಗ್ರೇನ್ ಪಾಯಿಂಟ್ ಇರುವುದು ಸುಮಾರು 1.5 ಮಿಲಿಯನ್ ಕಿಲೋಮೀಟರ್ ಅಥವಾ 15 ಲಕ್ಷ ಕಿಲೋಮೀಟರ್ ದೂರದಲ್ಲಿ.
ಇಲ್ಲಿ ಒಂದೇ ಲ್ಯಾಂಗ್ರೇಜ್ ಪಾಯಿಂಟ್ ಇರುವುದಿಲ್ಲ. ಸೂರ್ಯ ಮತ್ತು ಭೂಮಿಗೆ ಮಧ್ಯದಲ್ಲಿ ಲ್ಯಾಂಗ್ರೇಜ್ ಪಾಯಿಂಟ್ ಇರುತ್ತದೆ. ಇದನ್ನು ಮೊದಲನೇ ಲ್ಯಾಂಗ್ರೇಜ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಸೂರ್ಯ ಮತ್ತು ಭೂಮಿ ಇದ್ದು, ಭೂಮಿಯ ಹಿಂದೆ ಇರುವ ಲ್ಯಾಂಗ್ರೇಜ್ ಪಾಯಿಂಟ್ ಅನ್ನು ಎರಡನೇ ಲ್ಯಾಂಗ್ರೇಜ್ ಪಾಯಿಂಟ್ ಇರುತ್ತದೆ.
ಇಲ್ಲಿಯೇ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಕಾರ್ಯ ನಿರ್ವಹಿಸುತ್ತದೆ. ಇನ್ನೂ ಅರ್ಥವಾಗದಿದ್ದರೆ.. ನೀವು ಸೂರ್ಯ ಎಂದಿಟ್ಟುಕೊಳ್ಳಿ.. ನಿಮ್ಮ ಎದುರಿಗೆ ಭೂಮಿ ಇದೆ. ಅದರ ಹಿಂದೆ ಸುಮಾರು 15 ಲಕ್ಷ ಕಿಲೋಮೀಟರ್ಗಳ ದೂರದಲ್ಲಿರುವುದೇ ಎರಡನೇ ಲ್ಯಾಂಗ್ರೇಜ್ ಪಾಯಿಂಟ್.. ಇಲ್ಲಿಯೇ ಜೇಮ್ ವೆಬ್ ಟೆಲಿಸ್ಕೋಪ್ ಅನ್ನು ನಿಯೋಜನೆ ಮಾಡಲಾಗಿದೆ. ಒಟ್ಟು ಐದು ಲ್ಯಾಂಗ್ರೇಜ್ ಪಾಯಿಂಟ್ಗಳನ್ನು ಗುರ್ತಿಸಲಾಗಿದ್ದು, ಒಂದು, ಎರಡು ಮತ್ತು ಮೂರನೇ ಲ್ಯಾಂಗ್ರೇಜ್ ಪಾಯಿಂಟ್ಗಳು ಎಲ್ಲವೂ ಸರಳರೇಖೆಯಲ್ಲಿ ಇರುತ್ತವೆ ಎಂದು ತಿಳಿದುಕೊಂಡಿರಬೇಕಾದ ವಿಚಾರ.
ಇನ್ನೇನು ಕಾರ್ಯನಿರ್ವಹಣೆಗೆ ಬಾಹ್ಯಾಕಾಶದಲ್ಲಿ ಜೇಮ್ ವೆಬ್ ಟೆಲಿಸ್ಕೋಪ್ ಸಿದ್ಧವಾಗಿದ್ದು, ಆಸ್ಟ್ರೇಲಿಯಾದ ಸ್ವಿನ್‌ಬರ್ನ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞರ ತಂಡವನ್ನೂ ಸೇರಿದಂತೆ ವಿಶ್ವದ ಖಗೋಳದ ವಿಜ್ಞಾನಿಗಳ ಸಮುದಾಯಗಳು ಪ್ರಮುಖ ಆವಿಷ್ಕಾರಗಳಿಗೆ ಸಿದ್ಧತೆ ನಡೆಸುತ್ತಿವೆ.
1990ರಲ್ಲೇ ಜೇಮ್ಸ್ ಕಲ್ಪನೆ : ಜೇಮ್ಸ್ ವೆಬ್ ಟೆಲಿಸ್ಕೋಪ್ ಬಗ್ಗೆ ಸ್ವಿನ್‌ಬರ್ನ್ ತಾಂತ್ರಿಕ ವಿಶ್ವವಿದ್ಯಾಲಯ ಕಾರ್ಲ್ ಗ್ಲೇಜ್‌ಬ್ರೂಕ್ ಈ ರೀತಿಯಾಗಿ ಹೇಳುತ್ತಾರೆ. 2012ರಲ್ಲಿ, ನಾನು ದ ಕನ್ಸರ್ವೇಷನ್ ಪತ್ರಿಕೆಗಾಗಿ ಲೇಖನವೊಂದನ್ನು ಬರೆದಿದ್ದೆನು. ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು 2018ರಲ್ಲಿ ಉಡಾವಣೆ ಮಾಡಲು ದಿನಾಂಕ ನಿಗದಿ ಮಾಡಲಾಗಿತ್ತು.
ಈ ಯೋಜನೆ ಮೂಲತಃ ಕಲ್ಪನೆ 1990ರ ದಶಕದಲ್ಲಿಯೇ ಬಂದಿದ್ದು, 2010ಕ್ಕೆ ಮೊದಲು ಇದನ್ನು ಉಡಾವಣೆ ಮಾಡುವುದು ನಮ್ಮ ಗುರಿಯಾಗಿತ್ತು. ಈಗ ಸುಮಾರು 30 ವರ್ಷಗಳ ನಂತರ ಅದನ್ನು 10 ಬಿಲಿಯನ್ ಅಮೆರಿಕನ್ ಡಾಲರ್ ವ್ಯಯಿಸಿ, ಇದನ್ನು ಉಡಾವಣೆ ಮಾಡಲಾಗಿದೆ ಎಂದಿದ್ದಾರೆ.