ಕರ್ನಾಟಕ

karnataka

ಪ್ರತಿಕೂಲ ಹವಾಮಾನ: ನಾಸಾದ ಮೂನ್ ರಾಕೆಟ್‌ ಮತ್ತೆ ವಿಳಂಬ

By

Published : Nov 9, 2022, 11:35 AM IST

ಯುಎಸ್‌ಎದ ಫ್ಲೋರಿಡಾ ಕರಾವಳಿಗೆ ನಕೋಲ್ ಚಂಡಮಾರುತ ಅಪ್ಪಳಿಸಲಿದ್ದು, ನಾಸಾವು ಚಂದ್ರನಲ್ಲಿಗೆ ರಾಕೆಟ್ ಉಡಾವಣೆಯನ್ನು ಮುಂದೂಡಿದೆ.

NASA Moon rocket launch postponed again
ನಾಸಾ ದ ಚಂದ್ರನ ರಾಕೆಟ್ ಉಡಾವಣೆ ಮತ್ತೆ ಮುಂದೂಡಿಕೆ

ಕೇಪ್ ಕ್ಯಾನವೆರಲ್: ಫ್ಲೋರಿಡಾ ಕರಾವಳಿಗೆ ನಕೋಲ್ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆಯಿದ್ದು, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಚಂದ್ರನ ಅಂಗಳಕ್ಕೆ ರಾಕೆಟ್ ಉಡಾವಣೆಯನ್ನು ಮತ್ತೆ ಮುಂದೂಡಿದೆ. ಇಂಧನ ಸೋರಿಕೆಯಿಂದಾಗಿ ಅಗಸ್ಟ್‌ನಲ್ಲಿ ನಾಸಾಗೆ ಎರಡು ಬಾರಿ ಹಿನ್ನಡೆಯಾಗಿತ್ತು. ಆದರೆ ಇದೀಗ ಚಂಡಮಾರುತ ಭೀತಿಯಿಂದಾಗಿ ಉಡಾವಣೆಯು ಮುಂದಿನ ಬುಧವಾರದವರೆಗೆ ವಿಳಂಬಗೊಳ್ಳಲಿದೆ. ಆದರೂ ಪರಿಸ್ಥಿತಿಗೆ ಅನುಗುಣವಾಗಿ, ಭಾರಿ ಗಾಳಿ-ಮಳೆಯನ್ನು ತಡೆದುಕೊಳ್ಳುವಂತೆ ರಾಕೆಟ್ ವಿನ್ಯಾಸಗೊಳಿಸಲಾಗಿದೆ ಎಂದು ನಾಸಾ ಹೇಳಿದೆ.

ABOUT THE AUTHOR

...view details