ವಾಷಿಂಗ್ಟನ್:ಚಂದ್ರನ ಮೇಲ್ಮೈನಲ್ಲಿರುವ ತಗ್ಗು ಪ್ರದೇಶವಾದ ಮೇರ್ ಕ್ರಿಸಿಯಂನಲ್ಲಿ ನೀರಿನ ಅಂಶವಿರುವ ಕುರಿತು ಸಂಶೋಧನೆ ನಡೆಸಲು ಹಾಗೂ ಇದಕ್ಕೆ ಸಂಪನ್ಮೂಲಗಳನ್ನು ಒದಗಿಸುವ ದೃಷ್ಟಿಯಿಂದ ಫೈರ್‌ಫ್ಲೈ ಏರೋಸ್ಪೇಸ್ ಸಂಸ್ಥೆಗೆ ನಾಸಾ $ 93.3 ಮಿಲಿಯನ್ ಹಣವನ್ನು ನೀಡಿದೆ.
ಈ ಮೂಲಕ ನಾಸಾ ಚಂದ್ರನ ಮೇಲೆ ಮಾನವ ಕಾರ್ಯಾಚರಣೆಗಳಿಗೆ ಸಿದ್ಧವಾಗಲು ಸಹಾಯ ಮಾಡುತ್ತಿದೆ. ಈ ಒಂದು ಮೊತ್ತವು ನಾಸಾದ ಕಮರ್ಷಿಯಲ್ ಲುನಾರ್ ಪೇಲೋಡ್ ಸೇವೆಗಳ (ಸಿಎಲ್ಪಿಎಸ್) ಉಪಕ್ರಮದ ಒಂದು ಭಾಗವಾಗಿದೆ. ಚಂದ್ರನ ಮೇಲ್ಮೈಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪೇಲೋಡ್‌ಗಳನ್ನು ತ್ವರಿತವಾಗಿ ಇಳಿಸಲು ವಾಣಿಜ್ಯ ಪಾಲುದಾರರ ಸೇವೆಯನ್ನು ಸಂಸ್ಥೆ ಭದ್ರಪಡಿಸುತ್ತಿದೆ. ಈ ಉಪಕ್ರಮವು ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ.