ಸ್ಯಾನ್ಫ್ರಾನ್ಸಿಸ್ಕೋ: ಐಫೋನ್ 15 ಸರಣಿಯ ಮೊಬೈಲ್ಗಳು ಸೆಪ್ಟೆಂಬರ್ 22ರಿಂದ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರು ಕೊಳ್ಳಲು ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. ಈ ಹಿಂದಿನ ತಮ್ಮ ಐಫೋನ್ಗಳಿಗಿಂತ ಮತ್ತಷ್ಟು ಉತ್ತಮ ಹಾಗೂ ವಿಶೇಷ ವಿನ್ಯಾಸ ಹಾಗೂ ವೈಶಿಷ್ಟ್ಯದಿಂದ ಈ ಐ ಫೋನ್ 15 ಸರಣಿ ಮೊಬೈಲ್ಗಳಿವೆ.
ಈ ಐಫೋನ್ ಸರಣಿಯ ಫೋನ್ನ ವಿನ್ಯಾಸ ಮತ್ತು ಕ್ಯಾಮೆರಾಗ ವಿಶ್ವದ ಶ್ರೀಮಂತ, ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಕೂಡ ಬೆರಗಾಗಿದ್ದಾರೆ. ಈ ಹಿನ್ನಲೆ ತಾವು ಕೂಡ ಐಫೋನ್ 15 ತೆಗೆದುಕೊಳ್ಳುವುದಾಗಿ ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಐಫೋನ್ 15 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿರುವ ಅವರು, ಆ್ಯಪಲ್ ಸಿಇಒ ಟಿಮ್ ಕುಕ್ ಐಫೋನ್ 15 ಪ್ರೋನಲ್ಲಿ ಹೆಸರಾಂತ ಫೋಟೋಗ್ರಾಫರ್ ಸ್ಟೀಫನ್ ವಿಲ್ಕ್ಸ್ ಮತ್ತು ರೂಬೆನ್ ವು ತೆಗೆದಿದ್ದ ಒಂದು ಫೋಟೋವನ್ನು ಹಂಚಿಕೊಂಡಿದ್ದರು.
ಈ ಫೋಟೋ ಮತ್ತು ವಿಡಿಯೋಗಳ ಉತ್ತಮ ಗುಣಮಟ್ಟಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಮಸ್ಕ್ ಐಫೋನ್ 15 ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ವಿಶ್ವದ ಹೆಸರಾಂತ ಫೋಟೋಗ್ರಾಫರ್ ಆಗಿರುವ ಸ್ಟೀಫನ್ ವಿಲ್ಕ್ಸ್ ಮತ್ತು ರೂಬೆನ್ ವು ಐಫೋನ್ 15 ಪ್ರೋ ಮಾಕ್ಸ್ನಲ್ಲಿ ತಮ್ಮ ಅದ್ಭುತ ಕ್ರಿಯಾತ್ಮಕತೆಯನ್ನು ತೋರಿಸಿದ್ದಾರೆ. ರೋದೆ ದ್ವೀಪ ಬೇಸಿಗೆಯ ಮರುಭೂಮಿ ವೈವಿಧ್ಯದ ಫೋಟೋಗಳು ಅದ್ಭುತ ದೃಶ್ಯಗಳು ಮೋಡಿ ಮಾಡಿದವು ಎಂದು ಕುಕ್ ಎಕ್ಸ್ನಲ್ಲಿ ಶುಕ್ರವಾರ ಪೋಸ್ಟ್ ಮಾಡಿದ್ದರು.