ಸ್ಯಾನ್ ಫ್ರಾನ್ಸಿಸ್ಕೊ: IOS ಫೋನ್ ಲಿಂಕ್ ಈಗ ಎಲ್ಲ ವಿಂಡೋಸ್ 11 ಗ್ರಾಹಕರಿಗೆ ಲಭ್ಯವಿದೆ ಎಂದು ಮೈಕ್ರೊಸಾಫ್ಟ್ ಇಂದು ಘೋಷಿಸಿದೆ. ಇದು ಐಫೋನ್ ಬಳಕೆದಾರರಿಗೆ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, iMessage ಮೂಲಕ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು, ತಮ್ಮ ಕಾಂಟ್ಯಾಕ್ಟ್ಗಳನ್ನು ನೋಡಲು ಮತ್ತು ತಮ್ಮ ಫೋನ್‌ನ ನೋಟಿಫಿಕೇಶನ್ಗಳನ್ನು ತಮ್ಮ ವಿಂಡೋಸ್ ಪಿಸಿಯಲ್ಲಿ ನೇರವಾಗಿ ನೋಡಲು ಅವಕಾಶ ನೀಡುತ್ತದೆ.
ಇಂಥ ಫೋನ್ ಲಿಂಕ್ ಈ ಹಿಂದೆ ಆ್ಯಂಡ್ರಾಯ್ಡ್ ಫೋನ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಕಂಪನಿಯು ಕಳೆದ ತಿಂಗಳು 85 ಮಾರುಕಟ್ಟೆಗಳಲ್ಲಿ 39 ಭಾಷೆಗಳಲ್ಲಿ ವಿಂಡೋಸ್ 11 ನಲ್ಲಿ iOS ಫೋನ್ ಲಿಂಕ್ ಜಾರಿಗೊಳಿಸಲು ಪ್ರಾರಂಭಿಸಿತ್ತು ಮತ್ತು ಇದು ಎಲ್ಲ ಗ್ರಾಹಕರನ್ನು ತಲುಪಲು ಕೆಲ ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
ಫೋನ್ ಲಿಂಕ್ ವೈಶಿಷ್ಟ್ಯವು ಕರೆಗಳು, ಸಂದೇಶಗಳು ಮತ್ತು ಸಂಪರ್ಕಗಳಿಗೆ ಮೂಲ ಬೆಂಬಲವನ್ನು ನೀಡುತ್ತದೆ. ಆದರೆ ಇದು ಕೆಲವು ಮಿತಿಗಳನ್ನು ಹೊಂದಿದೆ. ಇದು ಗ್ರೂಪ್ ಮೆಸೇಜುಗಳಿಗೆ ಪ್ರತ್ಯುತ್ತರಿಸಲು ಅಥವಾ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಸೌಲಭ್ಯವನ್ನು ಸಪೋರ್ಟ್ ಮಾಡುವುದಿಲ್ಲ. ಮೆಸೇಜುಗಳು ಸೆಷನ್ ಆಧಾರಿತವಾಗಿರುತ್ತವೆ ಮತ್ತು ನಿಮ್ಮ ಫೋನ್ ನಿಮ್ಮ ಪಿಸಿ ಗೆ ಸಂಪರ್ಕಗೊಂಡಾಗ ಮಾತ್ರ ಬರುತ್ತವೆ ಎಂದು ಮೈಕ್ರೊಸಾಫ್ಟ್ ಹೇಳಿದೆ. ವಿಂಡೋಸ್ ನೋಟಿಫಿಕೇಷನ್ಗಳ ಮೂಲಕ ಪಿಸಿಗೆ ನೋಟಿಫಿಕೇಶನ್ಗಳನ್ನು ತಲುಪಿಸಲಾಗುತ್ತದೆ. ಅಂದರೆ ಬಳಕೆದಾರರು ಅವುಗಳನ್ನು ವಿಂಡೋಸ್ ಇಂಟರ್ಫೇಸ್‌ನಿಂದ ನೋಡಬಹುದು, ಪಿನ್ ಮಾಡಬಹುದು ಮತ್ತು ವಜಾಗೊಳಿಸಬಹುದು.