ನವದೆಹಲಿ: ಸಾಫ್ಟ್ವೇರ್ ದೈತ್ಯ ಮೈಕ್ರೋಸಾಫ್ಟ್ ಒಡೆತನದ ಕ್ಲೌಡ್ ಕಂಪ್ಯೂಟಿಂಗ್ ಸರ್ವೀಸ್ ಮೈಕ್ರೋಸಾಫ್ಟ್ ಅಜ್ಯೂರ್ ಅತಿದೊಡ್ಡ ಡಿಡಿಒಎಸ್ ದಾಳಿಯನ್ನು ತಡೆದಿದೆ. ಈ ದಾಳಿ ಸೆಕೆಂಡ್ಗೆ 3.47 ಟೆರ್ರಾಬೈಟ್ ವೇಗದಲ್ಲಿ ನಡೆಸಲು ಯತ್ನಿಸಲಾಗಿತ್ತು ಎಂದು ತಿಳಿದು ಬಂದಿದೆ.
3.47 ಟಿಬಿಪಿಎಸ್ ವೇಗದಲ್ಲಿ ಏಷ್ಯಾದಲ್ಲಿ ಅಜ್ಯೂರ್ ಕ್ಲೌಡ್ ಕಂಪ್ಯೂಟಿಂಗ್ ಅಪ್ಲಿಕೇಷನ್ ಬಳಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿತ್ತು. ಈ ದಾಳಿಯನ್ನು ಸುಮಾರು 10 ಸಾವಿರ ಮೂಲಗಳಿಂದ ನಡೆಸಲಾಗಿತ್ತು.
ಏನಿದು ಡಿಡಿಒಎಸ್ ದಾಳಿ? ಹೇಗೆ?
ಡಿಡಿಒಎಸ್ ದಾಳಿಯನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ತಂತ್ರಜ್ಞಾನದ ಬಗ್ಗೆ ಸ್ವಲ್ಪ ಮಟ್ಟದ ಅರಿವಿರಬೇಕಾಗುತ್ತದೆ. ಡಿಡಿಒಎಸ್ ಅನ್ನು ವಿಸ್ತೃತ ರೂಪದಲ್ಲಿ ಹೇಳುವುದಾದರೆ ಸೇವೆ ವಿತರಣೆಯ ನಿರಾಕರಣೆ (Distributed Denial Of Service) ಎಂದು ಕರೆಯಲಾಗುತ್ತದೆ. ಅಂದರೆ 'ಬೇಕಾಗಿರುವ ಸೇವೆ ನೀಡಲು ಸಾಧ್ಯವಿಲ್ಲ' ಎಂದು ಅರ್ಥ.
ಒಂದು ವೇಳೆ ನೀವು ಯಾವುದಾದರೊಂದು ವೆಬ್ಸೈಟ್ ಅಥವಾ ಅಥವಾ ಬ್ಲಾಗ್ಗಳಿಗೆ ಹೋದಾಗ 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂಬ ಸೂಚನೆಯನ್ನು ಕೆಲವೊಮ್ಮೆ ನೀಡಿರುತ್ತೀರಿ. ಅದೇ ರೀತಿ ಕೆಲವೊಂದು ಸಾಫ್ಟ್ವೇರ್ ಅಪ್ಲಿಕೇಷನ್ಗಳಿಗೆ ತೆರಳಿದಾಗಲೂ ಈ ರೀತಿಯ ಸೂಚನೆಗಳನ್ನು ನಾವು ನೋಡಬಹುದು.
ಯಾವ ಯಾವ ಸೇವೆಗಳನ್ನು ನೀಡಬೇಕು ಎಂಬುದು ಸಾಫ್ಟ್ವೇರ್ ಅಪ್ಲಿಕೇಷನ್ ಸರ್ವರ್ನಲ್ಲಿ ನಿಗದಿ ಮಾಡಲಾಗಿರುತ್ತದೆ. ಒಂದು ಬಾರಿ ಕಳಿಸಿದರೆ, ಅದು 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂದು ಸೂಚನೆ ನೀಡುತ್ತದೆ. ಹತ್ತು ಬಾರಿ ನೀವು ಆ ಸೇವೆಗೆ ತೆರಳಲು ಮುಂದಾದರೂ, ಅದು 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂದು ಸೂಚಿಸುತ್ತದೆ.
ಇದೇ ರೀತಿಯಾಗಿ 10 ಸಾವಿರ ಮೂಲಗಳಿಂದ ಸೆಕೆಂಡ್ಗೆ 3.47 ಟೆರ್ರಾಬೈಟ್ ವೇಗದಲ್ಲಿ ಆ ಸೇವೆಗೆ ಯತ್ನಿಸಿದರೆ?.. ಅದನ್ನು ದಾಳಿ ಎನ್ನುತ್ತೇವೆ. ಅಂದರೆ 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂಬ ಸೂಚನೆಯನ್ನು ಅಷ್ಟೂ ಪ್ರಮಾಣದಲ್ಲಿ ನೀಡಲು ಸಾಧ್ಯವಾಗದ ಕಾರಣ ಆ ಕಂಪ್ಯೂಟರ್ನ ಸರ್ವರ್ ಕುಸಿಯುತ್ತದೆ. ಅಂದಹಾಗೆ ಈ ದಾಳಿಗೆ ಬೋಟ್ಗಳೆಂಬ ಸ್ವಯಂಚಾಲಿತ ಮಾಲ್ವೇರ್ಗಳನ್ನು ಬಳಸಲಾಗುತ್ತದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈಗ ಕೂಡಾ ನಡೆದಿರುವುದು ಅಂತಹುದ್ದೇ ದಾಳಿ. ಮೈಕ್ರೋಸಾಫ್ಟ್ ಅಜ್ಯೂರ್ ಇಂಥದ್ದೇ ದಾಳಿಯ್ನು ತಡೆದಿದೆ. ಅಜ್ಯೂರ್ ಕ್ಲೌಡ್ ಅಪ್ಲಿಕೇಷನ್ ಆಗಿದ್ದು, ಈ ಅಪ್ಲಿಕೇಷನ್ನಲ್ಲಿ ಗ್ರಾಹಕರು ತಮ್ಮ ತಮ್ಮ ದಾಖಲೆಗಳು, ಖಾಸಗಿ ಮಾಹಿತಿಯನ್ನೂ ಕೂಡಾ ಶೇಖರಿಸಿಟ್ಟಿಕೊಳ್ಳಬಹುದಾಗಿದೆ. ಒಂದು ವೇಳೆ ಸರ್ವರ್ ಕುಸಿದರೆ, ಗ್ರಾಹಕರ ಮಾಹಿತಿಗಳು ಹ್ಯಾಕರ್ಗಳ ಪಾಲಾಗುವ ಸಾಧ್ಯತೆ ಇರುತ್ತದೆ.
15 ನಿಮಿಷದಲ್ಲಿ ಈ ದಾಳಿಯನ್ನು ತಡೆದ ಅಜ್ಯೂರ್: ಮೈಕ್ರೋಸಾಫ್ಟ್ ಅಜ್ಯೂರ್ ಈ ದಾಳಿಯನ್ನು ತಡೆಯಲು 15 ನಿಮಿಷಗಳ ಸಮಯವನ್ನು ತೆಗೆದುಕೊಂಡಿದೆ. ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ದಾಳಿ ಎಂದು ಅಜ್ಯೂರ್ ನೆಟವರ್ಕಿಂಗ್ನ ಪ್ರಾಡಕ್ಟ್ ಮ್ಯಾನೇಜರ್ ಅಲಿಥಿಯಾ ಟೊಹ್ ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಸೆಕೆಂಡಿಗೆ 2.4 ಟೆರಾಬೈಟ್ ವೇಗದಲ್ಲಿ ದಾಳಿ ನಡೆಸಲಾಗಿದ್ದು, ಆ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿತ್ತು. ಡಿಸೆಂಬರ್ ತಿಂಗಳಲ್ಲಿ ಸೆಕೆಂಡ್ಗೆ 2.5 ಟೆರಾಬೈಟ್ ವೇಗದಲ್ಲಿ ನಡೆದ ದಾಳಿಯನ್ನು ತಡೆಯಲಾಗಿದ್ದು, ಇನ್ಮುಂದೆ ಇಂತಹ ದಾಳಿಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಅಲಿಥಿಯಾ ಟೊಹ್ ಭರವಸೆ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಗಳ ವೇಳೆ ಮತದಾರರಿಗೆ ಬಲ್ಕ್ ಸಂದೇಶಗಳ ರವಾನೆಗೆ ಹೊಸ ಟೂಲ್ - ವಾಟ್ಸ್ಆ್ಯಪ್