ಕರ್ನಾಟಕ

karnataka

ETV Bharat / science-and-technology

ಬಿಂಗ್ ಸರ್ಚ್​ಗೆ ಚಾಟ್‌ಜಿಪಿಟಿ ಸಂಯೋಜಿಸಿದ ಮೈಕ್ರೋಸಾಫ್ಟ್.. ಏನಿದರ ಪ್ರಯೋಜನ?

ತನ್ನ ಓಪನ್​ ಎಐ ಸಹಭಾಗಿತ್ವ ಮತ್ತು ಬಿಂಗ್ ಸರ್ಚ್​ಗೆ ಚಾಟ್​ಜಿಪಿಟಿ (ChatGPT )ಯನ್ನು ಸೇರಿಸುವ ಕುರಿತು ಮೈಕ್ರೋಸಾಫ್ಟ್ ಮಾಹಿತಿ ಹಂಚಿಕೊಳ್ಳಲಿದೆ.

By

Published : Feb 7, 2023, 4:30 PM IST

Microsoft set to integrate ChatGPT into Bing Search
ಬಿಂಗ್ ಸರ್ಚ್​ಗೆ ಚಾಟ್‌ಜಿಪಿಟಿಯನ್ನು ಸಂಯೋಜಿಸಿದ ಮೈಕ್ರೋಸಾಫ್ಟ್..

ಸ್ಯಾನ್ ಫ್ರಾನ್ಸಿಸ್ಕೊ(ಅಮೆರಿಕ): ಮೈಕ್ರೋಸಾಫ್ಟ್ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಈವೆಂಟ್​ ನಡೆಸುವುದಾಗಿ ತಿಳಿಸಿದೆ, ಈ ಈವೆಂಟ್‌ನಲ್ಲಿ ಮುಖ್ಯವಾಗಿ ಮೈಕ್ರೋಸಾಫ್ಟ್ ತನ್ನ ಓಪನ್ಎಐ ಸಹಭಾಗಿತ್ವ ಮತ್ತು ಬಿಂಗ್ ಸರ್ಚ್​ಗೆ ಚಾಟ್​ಜಿಪಿಟಿ (ChatGPT )ಯನ್ನು ಸೇರಿಸುವ ಕುರಿತು ಮಾಹಿತಿ ಹಂಚಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಗೂಗಲ್ ಸಂಸ್ಥೆ ಚಾಟ್​ಜಿಪಿಟಿ (ChatGPT )ಗೆ ಪ್ರತಿ ಸ್ಪರ್ಧಿಯಾಗಿ ಚಾಟ್‌ಬಾಟ್ "Bard" ಅನ್ನು ಘೋಷಿಸಿದ ನಂತರ ಮೈಕ್ರೋಸಾಫ್ಟ್ ನಡೆಸುತ್ತಿರುವ ಈ ಈವೆಂಟ್‌ ಟೆಕ್ ವಲಯದ ಗಮನ ಕೇಂದ್ರೀಕರಿಸಿದೆ.

ದಿ ವರ್ಜ್ ವರದಿಯ ಪ್ರಕಾರ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ತಮ್ಮ ಯೋಜನೆಗಳ ಕುರಿತ ಪ್ರಗತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಈವೆಂಟ್‌ ಆಮಂತ್ರಣದಲ್ಲಿ ತಿಳಿಸಲಾಗಿದೆ. ಇದಲ್ಲದೇ, ಮೈಕ್ರೋಸಾಫ್ಟ್ ತನ್ನ ಓಪನ್ಎಐ ಪಾಲುದಾರಿಕೆಯ ಜೂತೆ 10 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡ ನಂತರದ ಕಾರ್ಯಕ್ರಮ ಇದಾಗಿದ್ದು ಮಹತ್ವ ಪಡೆದುಕೊಂಡಿದೆ. ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆ ಮತ್ತು ಉತ್ಪನ್ನಗಳು, API ಸೇವೆಗಳು, ಸಂಶೋಧನೆಯಾದ್ಯಂತ ಎಲ್ಲಾ OpenAI ಕಾರ್ಯಭಾರಗಳಿಗೆ ಶಕ್ತಿ ನೀಡುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.

ಮೈಕ್ರೋಸಾಫ್ಟ್ ತನ್ನದೇ ಆದ ಗ್ರಾಹಕ ಮತ್ತು ಎಂಟರ್ಪ್ರೈಸ್ ಉತ್ಪನ್ನಗಳಲ್ಲಿ ವಿವಿಧ ಓಪನ್ಎಐ ಮಾದರಿಗಳನ್ನು ಸಂಯೋಜಿಸಲು ಉದ್ದೇಶಿಸಿದೆ. ಬಿಂಗ್ ಹೊರತುಪಡಿಸಿ, ವರ್ಡ್, ಪವರ್​ ಪಾಯಿಂಟ್ ಮತ್ತು ಔಟ್ಲುಕ್​ಗೆ ಓಪನ್​ ಎಐ ತಂತ್ರಜ್ಞಾನವನ್ನು ಸೇರಿಸಲಾಗುವುದು ಎಂಬ ವದಂತಿಗಳಿವೆ ಎಂದು ವರದಿ ತಿಳಿಸಿದೆ. ಟೆಕ್ ದೈತ್ಯ ಮೈಕ್ರೋಸಾಫ್ಟ್ ಇತ್ತೀಚೆಗೆ ಟೀಮ್ಸ್ ಪ್ರೀಮಿಯಂ ಅನ್ನು ಓಪನ್ಎಐ ಚಾಲಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ:iPhone ನಿಂದ ಚಿತ್ರೀಕರಣಗೊಂಡ ಫಿಲಂ 'ಫುರಸತ್': ಆ್ಯಪಲ್ ಸಿಇಒ ಟಿಮ್ ಕುಕ್ ಶ್ಲಾಘನೆ

ChatGPTಗೆ ಪ್ರತಿಸ್ಪರ್ಧಿಯಾಗಲಿದೆಯೇ ಗೂಗಲ್​ Apprentice Bard?: ಇದೇ ಫೆಬ್ರವರಿ 8ರ ಬೆಳಗ್ಗೆ 8:30 ಕ್ಕೆ ನಡೆಯಲಿರುವ ಗೂಗಲ್ ಈವೆಂಟ್‌ನಲ್ಲಿ ಗೂಗಲ್ ತನ್ನ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​) ತಂತ್ರಜ್ಞಾನದ ಪ್ರಗತಿಯನ್ನು ಅನಾವರಣಗೊಳಿಸಲಿದೆ. ಜನರು ಮಾಹಿತಿಯನ್ನು ಹುಡುಕುವ, ಅನ್ವೇಷಿಸುವ ಮತ್ತು ತೊಡಗಿಸಿಕೊಳ್ಳುವ ರೀತಿಯನ್ನು ಕಂಪನಿಯು AI ಮೂಲಕ ಹೇಗೆ ಬದಲಾಯಿಸಲಿದೆ ಮತ್ತು ಈ ಪ್ರಕ್ರಿಯೆಯನ್ನು ಮತ್ತಷ್ಟು ಶ್ರಮರಹಿತ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಹೇಗೆ ಮಾಡಲಿದೆ ಎಂಬುದನ್ನು ಈವೆಂಟ್​ನಲ್ಲಿ Google ಪ್ರದರ್ಶಿಸಲಿದೆ.

ಈವೆಂಟ್‌ನ ಸಮಯದಲ್ಲಿ Google ಹೊಸ ಸೇವೆ ಅಥವಾ ಉತ್ಪನ್ನವನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ವೇಗವಾಗಿ ಬೆಳೆಯುತ್ತಿರುವ OpenAI ಯ ಚಾಟ್‌ಬಾಟ್ ChatGPT ಗೆ ಉತ್ತರವಾಗಿ ತನ್ನದೇ ಕೃತಕ ಬುದ್ಧಿಮತ್ತೆ ಚಾಟ್​ ಬಾಟ್​ ಒಂದನ್ನು ಗೂಗಲ್ ಅನಾವರಣಗೊಳಿಸಬಹುದು ಎಂದು ತಿಳಿದು ಬಂದಿದೆ. OpenAI ನ ಚಾಟ್‌ಬಾಟ್ ChatGPT ಕಳೆದ ಕೆಲವು ದಿನಗಳಿಂದ ಇಂಟರ್ನೆಟ್​ ಜಗತ್ತಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ವರದಿಯ ಪ್ರಕಾರ ಜನವರಿಯಲ್ಲಿ ChatGPT 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು ಅಗ್ರಸ್ಥಾನದಲ್ಲಿದೆ. ಇದು ಇನ್​ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಂಥ ಅಪ್ಲಿಕೇಶನ್‌ಗಳಿಗಿಂತ ಹೆಚ್ಚು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್, ಓಪನ್ ಎಐನ ಚಾಟ್‌ಜಿಪಿಟಿ ಪ್ರಾರಂಭವಾದ ನಂತರ ತನ್ನ ಸರ್ಚ್ ಎಂಜಿನ್ ವ್ಯವಹಾರಕ್ಕೆ ಕುತ್ತು ಬರುವ ಸಾಧ್ಯತೆಯನ್ನು ಊಹಿಸಿದೆ. ಹೀಗಾಗಿ ಕಂಪನಿ ಆಂತರಿಕವಾಗಿ ಕೋಡ್ ರೆಡ್ ಅನ್ನು ಘೋಷಿಸಿದೆ. ಹೀಗಾಗಿ ಗೂಗಲ್ ಹಲವಾರು ಹೊಸ AI ಪರಿಕರಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ABOUT THE AUTHOR

...view details