ಕರ್ನಾಟಕ

karnataka

ETV Bharat / science-and-technology

ಮೆಟಾ ತೊರೆಯುತ್ತಿರುವ ಕಾರ್ಪೊರೇಟ್ ಅಭಿವೃದ್ಧಿ ಮುಖ್ಯಸ್ಥ ಅಮೀನ್ ಝೌಫೊನೌನ್ - ಮೆಟಾ

ಫೇಸ್‌ಬುಕ್​ನೊಂದಿಗೆ ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಆಕ್ಯುಲಸ್‌ ವಿಲೀನಗೊಳಿಸುವಲ್ಲಿ​ ಪ್ರಮುಖ ಪಾತ್ರವಹಿಸಿದ್ದ ಮೆಟಾದ ಉನ್ನತ ಕಾರ್ಯನಿರ್ವಾಹಕ ಅಮೀನ್ ಝೌಫೊನೌನ್ ಸಂಸ್ಥೆ ತೊರೆಯುತ್ತಿದ್ದಾರೆ.

ಮೆಟಾದ ಕಾರ್ಪೊರೇಟ್ ಅಭಿವೃದ್ಧಿ ಮುಖ್ಯಸ್ಥ ಅಮೀನ್ ಝೌಫೊನೌನ್
ಮೆಟಾದ ಕಾರ್ಪೊರೇಟ್ ಅಭಿವೃದ್ಧಿ ಮುಖ್ಯಸ್ಥ ಅಮೀನ್ ಝೌಫೊನೌನ್

By

Published : Oct 20, 2022, 4:51 PM IST

ಸ್ಯಾನ್ ಫ್ರಾನ್ಸಿಸ್ಕೋ:ಫೇಸ್‌ಬುಕ್​ ಜೊತೆ ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಆಕ್ಯುಲಸ್ ಸಂಸ್ಥೆಗಳನ್ನು ವಿಲೀನಗೊಳಿಸಲು​ ಕಾರಣಕರ್ತರಾಗಿದ್ದ ಮೆಟಾದ ಕಾರ್ಪೊರೇಟ್ ಅಭಿವೃದ್ಧಿ ಮುಖ್ಯಸ್ಥ ಅಮೀನ್ ಝೌಫೊನೌನ್ ಅವರು 12 ವರ್ಷಗಳ ನಂತರ ಸಂಸ್ಥೆ ತೊರೆಯುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಮೆಟಾ/ಫೇಸ್‌ಬುಕ್‌ನಲ್ಲಿ ಸುಮಾರು 12 ವರ್ಷಗಳ ತನಕ ಕೆಲಸ ಮಾಡಿದ್ದು, ಈಗ ಕಂಪನಿ ತೊರೆಯಲು ನಿರ್ಧರಿಸಿದ್ದೇನೆ. ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಆಕ್ಯುಲಸ್‌ನಂತಹ ಇತರ ಸೋಶಿಯಲ್​ ಮೀಡಿಯಾ ಫ್ಲಾಟ್​ಪಾರ್ಮ್​ಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ. ಪ್ರತಿದಿನ ನನಗೆ ಸ್ಫೂರ್ತಿ ನೀಡುವಂತಹ ಉತ್ತಮ ತಂಡಗಳೊಂದಿಗೆ ಕೆಲಸ ಮಾಡಿರುವೆ. ಅವರ ಜೊತೆಗಿನ ಬಾಂಧವ್ಯವನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಫೇಸ್​ಬುಕ್ ಇನ್​ಸ್ಟಂಟ್​ ಆರ್ಟಿಕಲ್ ಫಾರ್ಮ್ಯಾಟ್ ನಿಲ್ಲಿಸಲು META ನಿರ್ಧಾರ

ABOUT THE AUTHOR

...view details