ಸ್ಯಾನ್ ಫ್ರಾನ್ಸಿಸ್ಕೊ: ಫೇಸ್ಬುಕ್ನಲ್ಲಿರುವ ಇನ್ಸ್ಟಂಟ್ ಆರ್ಟಿಕಲ್ ಫಾರ್ಮ್ಯಾಟ್ ಅನ್ನು ಮೆಟಾ ಮುಂದಿನ ವರ್ಷದ ಹೊತ್ತಿಗೆ ನಿಲ್ಲಿಸಲಿದೆ. ಈ ಮೂಲಕ ಕಂಪನಿಯು ಸುದ್ದಿ ಆಧರಿತ ಉತ್ಪನ್ನಗಳ ಬದಲು ಟಿಕ್‌ಟಾಕ್ ರೀತಿಯ ಉತ್ಪನ್ನಗಳ ಕಡೆಗೆ ಗಮನಹರಿಸಲು ಯೋಜಿಸಿದೆ. ತ್ವರಿತವಾಗಿ ಲೋಡ್ ಆಗುವ ಇನ್ಸ್ಟಂಟ್ ಆರ್ಟಿಕಲ್ ಫಾರ್ಮ್ಯಾಟ್ 2015ರಲ್ಲಿ ಲಾಂಚ್ ಆಗಿದ್ದು, ಇದನ್ನು 2023ರ ಏಪ್ರಿಲ್ ಹೊತ್ತಿಗೆ ನಿಲ್ಲಿಸಲಾಗುತ್ತಿದೆ. ಇನ್ಸ್ಟಂಟ್ ಆರ್ಟಿಕಲ್ ಇದು ಮೊಬೈಲ್ ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಸುದ್ದಿ ಲೇಖನಗಳನ್ನು ತ್ವರಿತವಾಗಿ ಲೋಡ್ ಮಾಡುವ ಫಾರ್ಮ್ಯಾಟ್ ಆಗಿದೆ.
ಇನ್ಸ್ಟಂಟ್ ಆರ್ಟಿಕಲ್ ಗೆ ಬೆಂಬಲ ಹಿಂತೆಗೆದುಕೊಂಡ ನಂತರ ಫೇಸ್ಬುಕ್ನಲ್ಲಿನ ನ್ಯೂಸ್ ಲಿಂಕ್ಗಳು ಪಬ್ಲಿಷರ್ನ ಮೊಬೈಲ್ ಸೈಟ್ಗೆ ಕರೆದುಕೊಂಡು ಹೋಗಲಿವೆ. ಕಂಪನಿಯು ಈಗ ಸುದ್ದಿ ಪ್ರಕಾಶಕರಿಗೆ ತಮ್ಮ ಫೇಸ್‌ಬುಕ್ ತಂತ್ರಗಳನ್ನು ಮರುಹೊಂದಿಸಲು ಆರು ತಿಂಗಳ ಕಾಲಾವಕಾಶವನ್ನು ನೀಡುತ್ತಿದೆ. ಕಂಪನಿಯು ಒಮ್ಮೆ ತನ್ನನ್ನು ಫಿಫ್ತ್ ಎಸ್ಟೇಟ್ ಎಂದು ಕರೆದುಕೊಂಡಿತ್ತು ಮತ್ತು ಬ್ರೇಕಿಂಗ್ ನ್ಯೂಸ್ ಅಲರ್ಟ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಮೀಸಲಾದ ಸ್ಥಳೀಯ ಸುದ್ದಿ ವಿಭಾಗವನ್ನು ಒಳಗೊಂಡಿರುವ ಪರಿಷ್ಕೃತ ಸುದ್ದಿ ಟ್ಯಾಬ್ ಅನ್ನು ಪ್ರಾರಂಭಿಸಿತ್ತು.