ಲಂಡನ್:ಜನಪ್ರಿಯ ಮೈಕ್ರೋಬ್ಲಾಗಿಂಗ್ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ದಿನಕ್ಕೊಂದು ಷರತ್ತು, ನಿಯಮ ಹಾಕುತ್ತಿದ್ದು, ಬಳಕೆದಾರರ ತಲೆ ಕೆಡಿಸಿದೆ. ಇದನ್ನೇ ಬಳಸಿಕೊಂಡಿರುವ ಫೇಸ್ಬುಕ್, ವಾಟ್ಸ್‌ಆ್ಯಪ್ ಕಂಪನಿಗಳ ಮಾತೃ ಸಂಸ್ಥೆಯಾದ ಮೆಟಾ ಸಂಸ್ಥೆ ಘೋಷಿಸಿದಂತೆ ಟ್ವಿಟರ್ನಂತೆ ಇರುವ 'ಥ್ರೆಡ್ಸ್ ಆ್ಯಪ್' ಬಿಡುಗಡೆ ಮಾಡಿದೆ.
ಬ್ರಿಟನ್ನಲ್ಲಿ ಮೊದಲು ಆ್ಯಪಲ್ ಮತ್ತು ಗೂಗಲ್ ಆಂಡ್ರಾಯ್ಡ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಲಭ್ಯವಿತ್ತು. ಇದೀಗ ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಗೆ ಸಿಗಲಿದೆ. ಮೆಟಾ ಒಡೆತನದ ಥ್ರೆಡ್ಸ್ ಟ್ವಿಟರ್ನಂತೆ ಫೋಟೋ, ವಿಡಿಯೋ, ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಈಗಿರುವ ಇನ್ಸ್ಟಾಗ್ರಾಮ್ ಖಾತೆ ಮೂಲಕವೇ ಇದನ್ನು ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡಬಹುದು.
ಥ್ರೆಡ್ಸ್ ವಿಶೇಷತೆಗಳೇನು?:ಎಲಾನ್ ಮಸ್ಕ್ ದಿನದ ಟ್ವಿಟರ್ ಬಳೆಕೆಯ ಮೇಲೂ ಮಿತಿ ಹೇರಿದ್ದು, ಅದಕ್ಕೆ ಪರ್ಯಾಯವಾಗಿ ಮೆಟಾ ಸಂಸ್ಥೆ ಥ್ರೆಡ್ಸ್ ಅನ್ನು ಲಾಂಚ್ ಮಾಡಿದೆ ಎಂದೇ ಹೇಳಲಾಗಿದೆ. ಥ್ರೆಡ್ಸ್ ಆ್ಯಪ್ನಲ್ಲಿ ಲೈಕ್, ಪೋಸ್ಟ್, ರೀಪೋಸ್ಟ್, ಎಡಿಟ್, ರಿಸೀವ್ಡ್ ಲೈಕ್ಸ್ ಅಂಡ್ ಕಾಮೆಂಟ್ ಸೆಕ್ಷನ್ ನೀಡಲಾಗಿದೆ. ಇದನ್ನು ಥೇಟ್ ಟ್ವಿಟರ್ನಂತೆಯೇ ರೂಪಿಸಲಾಗಿದೆ.
ಇಲ್ಲಿ ಫೋಟೋ, ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಅದಕ್ಕೆ ಬರುವ ಕಾಮೆಂಟ್, ಲೈಕ್ಸ್ಗಳು ಕೆಳಭಾಗದಲ್ಲಿ ಕಾಣಸಿಗುತ್ತವೆ. ಇಲ್ಲಿ ಇಂದಿನ ವಿಷಯಗಳ ಚರ್ಚೆಯ ಜೊತೆಗೆ ನಾಳೆಗೆ ಟ್ರೆಂಡ್ ಆಗುವ ಸಬ್ಜೆಕ್ಸ್ ಬಗ್ಗೆಯೂ ಚರ್ಚೆ ಮಾಡಬಹುದು. ಹೀಗಾಗಿ ಇದು ಇನ್ಸ್ಟಾಗ್ರಾಮ್ನ ಮುಂದುವರಿದ ಭಾಗ ಎಂದೇ ಹೇಳಬಹುದು ಎಂದು ಕಂಪನಿ ತಿಳಿಸಿದೆ.